Advertisement

ರಿಲಯನ್ಸ್‌ನಿಂದ 5ಜಿ ತರಂಗಾಂತರ ಅಭಿವೃದ್ಧಿ!

10:47 AM Jul 16, 2020 | mahesh |

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾರೀ ಘೋಷಣೆಗಳಾಗಿವೆ. ತಿಂಗಳ ಹಿಂದಷ್ಟೇ ಕೇಂದ್ರಸರ್ಕಾರ ಚೀನಾ ಮೂಲದ ಕಂಪ  ನಿ ಗಳಿಂದ 5ಜಿ ತರಂಗಾಂತರ ತಂತ್ರಜ್ಞಾನ ಪಡೆಯುವುದನ್ನು ರದ್ದು ಮಾಡಿತ್ತು. ಇದೀಗ ರಿಲಯನ್ಸ್‌ ಇಂಡಸ್ಟ್ರೀಸ್‌ ತಾನೇ ಸ್ವತಃ 5ಜಿ ತರಂಗಾಂತರ ಅಭಿವೃದ್ಧಿ ಪಡಿಸುತ್ತಿರುವುದಾಗಿ ತಿಳಿಸಿದೆ. ಒಮ್ಮೆ 5ಜಿ ತರಂಗಾಂತರ ಹಂಚಿಕೆಯಾದರೆ, ಪರೀಕ್ಷಾರ್ಥ ಪ್ರಯೋಗ ಮಾಡಲಾಗುತ್ತದೆ. ಬಹುಶಃ ಮುಂದಿನ ವರ್ಷ ಇದನ್ನು ಬಳಸಲು ಸಾಧ್ಯವಾಗ ಬಹುದು ಎಂದು ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ತಿಳಿಸಿದ್ದಾರೆ. ಬರೀ 5ಜಿ ಮಾತ್ರವಲ್ಲ, 4ಜಿ, ಕ್ಲೌಡ್‌ ಕಂಪ್ಯೂಟಿಂಗ್‌, ಆಪರೇಟಿಂಗ್‌ ಸಿಸ್ಟಮ್‌, ಕೃತಕ ಬುದ್ಧಿಮತ್ತೆ ಈ ರೀತಿ ಹಲವು ಕಡೆ ವಿಶ್ವದರ್ಜೆಯ ತಂತ್ರಜ್ಞಾನ ಗಳನ್ನು ನಾವು ಸೃಷ್ಟಿಸುತ್ತಿದ್ದೇವೆಂದು ಅಂಬಾನಿ ಹೇಳಿದ್ದಾರೆ.

Advertisement

ಜಗತ್ತಿನ ಮೂರನೇ ಮೌಲ್ಯಯುತ ತೈಲ ಕಂಪನಿ
ಇತ್ತೀಚೆಗೆ ರಿಲಯನ್ಸ್‌ ಕಂಪನಿಯ ಷೇರು ಬೆಲೆ ದಾಖಲೆಯ ಮಟ್ಟಕ್ಕೆ ಏರಿತ್ತು. ಅದರಿಂದ ಅದರ ಮಾರುಕಟ್ಟೆ ಮೌಲ್ಯ 12.2 ಲಕ್ಷ ಕೋಟಿ ರೂ. ಮೀರಿತ್ತು. ಈ ಏರಿಕೆಯಿಂದ ಇಂತಹ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ರಿಲಯನ್ಸ್‌ ಪಡೆದು ಕೊಂಡಿದೆ. ಅಷ್ಟು ಮಾತ್ರವಲ್ಲ ಅದೀಗ ಜಗತ್ತಿನಲ್ಲಿಯೇ ಮೂರನೇ ಬೃಹತ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ತೈಲ ಕಂಪನಿ. ಅಗ್ರಸ್ಥಾನದಲ್ಲಿ ಸೌದಿ ಅರಾಮ್ಕೊ, ಎಕ್ಸಾನ್‌ ಮೊಬಿಲ್‌ ಇವೆ.

ಗೂಗಲ್‌ನಿಂದ ಜಿಯೋದಲ್ಲಿ 33,732 ಕೋ.ರೂ. ಹೂಡಿಕೆ
ಮಂಗಳವಾರವಷ್ಟೇ ಜಿಯೋ ದೂರಸಂಪರ್ಕ ಸಂಸ್ಥೆಯಲ್ಲಿ ಗೂಗಲ್‌ ಹೂಡಿಕೆ ಮಾಡಬಹುದೆಂದು ವರದಿಗಳಾಗಿದ್ದವು. ಬುಧವಾರ ಅದು ನಿಜವಾಗಿದೆ, ಗೂಗಲ್‌ 33,732 ಕೋಟಿ ರೂ. (4.5 ಬಿಲಿಯನ್‌ ಡಾಲರ್‌) ಹೂಡುವುದಾಗಿ ಮುಕೇಶ್‌ ಅಂಬಾನಿ ಪ್ರಕಟಿಸಿದ್ದಾರೆ. ಭಾರತದಲ್ಲಿ ಡಿಜಿಟಲ್‌ ಇಂಡಿ ಯಾದ ಸಾಕಾರಕ್ಕಾಗಿ 75,000 ಕೋಟಿ ರೂ. ಹೂಡುವುದಾಗಿ ಮೊನ್ನೆಯಷ್ಟೇ ಗೂಗಲ್‌ ಸಿಇಒ ಸುಂದರ್‌ ಪಿಚೈ ಹೇಳಿದ್ದರು. ಅದರ ಬೆನ್ನಲ್ಲೇ ಈ ಹೂಡಿಕೆ ನಡೆದಿದೆ. ಗೂಗಲ್‌, ಜಿಯೋದ ಶೇ.7.7ರಷ್ಟು ಷೇರು ಖರೀದಿಸಿದೆ. ಅದೀಗ ಜಿಯೋದಲ್ಲಿ ಹೂಡಿಕೆ ಮಾಡಿದ 13ನೇ ವಿದೇಶಿ ಕಂಪನಿ. ಇದರಿಂದ ಒಟ್ಟಾರೆ 1.52 ಲಕ್ಷ ಕೋಟಿ ರೂ.ಗಳನ್ನು ರಿಲಯನ್ಸ್‌ ಸಂಗ್ರಹಿಸಿ¨

ಜಿಯೋ ಕನ್ನಡಕ!
ಇದೇ ಕಾರ್ಯಕ್ರಮದಲ್ಲಿ ರಿಲಯನ್ಸ್‌, ಜಿಯೋ ಕನ್ನಡಕವನ್ನು ಬಿಡುಗಡೆ ಮಾಡಿದೆ. ಇದು ತನ್ನ ಹೊಸ ಶೋಧ ಎಂದು ಕಂಪನಿ ಹೇಳಿಕೊಂಡಿದೆ. ಈ ಕನ್ನಡಕ ಮಾಮೂಲಿ ಕನ್ನಡಕವಲ್ಲ. ಇದನ್ನು ಬಳಸಿ ನಾವು ನೋಡುವ ದೃಶ್ಯಾವಳಿಗಳು ತ್ರೀಡಿ ಅನುಭವ ನೀಡುತ್ತವೆ. ಅಂದರೆ ಇದನ್ನು ಕಣ್ಣಿಗೆ ಧರಿಸಿ, ಇದರ ತಂತುವನ್ನು ಮೊಬೈ ಲ್‌ಗೆ ಸಿಕ್ಕಿಸಿ ವೀಕ್ಷಿಸಿದರೆ, ಅಂತರ್ಜಾಲ ವೀಕ್ಷಣೆ ಅತ್ಯಂತ ಸ್ಪಷ್ಟವಾಗಿರುತ್ತದೆ! ಹಾಗೆಯೇ ಕೇಳಿಸಿಕೊಳ್ಳಲು ಕನ್ನಡಕದಲ್ಲಿಯೇ ಶ್ರವಣ ವ್ಯವಸ್ಥೆಯಿದೆ.
ಈ ತಂತ್ರಜ್ಞಾನ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ನೆರವಾಗುತ್ತದೆ. ಅಂತ ರ್ಜಾಲದ ಮೂಲಕ ಆನ್‌ಲೈನ್‌ ತರಗತಿಗಳನ್ನು ನಡೆಸುವಾಗ, ಇದನ್ನು ಬಳಸಿದರೆ, ಗುರುಶಿಷ್ಯರಿಬ್ಬರು ಹತ್ತಿರದಲ್ಲಿಯೇ ಇರುವ ಅನುಭವವಾಗುತ್ತದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next