Advertisement
ನಗರದಲ್ಲಿ ಸೋಂಕಿತರ ಸಂಖ್ಯೆ 2,531 ಏರಿಕೆ ಯಾಗಿದ್ದು, ಶನಿವಾರ ಮೂವರು ಸೋಂಕಿತರು ಮೃತ ಪಡುವ ಮೂಲಕ 84ಕ್ಕೆ ಏರಿಕೆಯಾಗಿದೆ. 125 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನು 1,913 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. 7 ಜನರು ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 16,688 ವ್ಯಕ್ತಿಗಳಿಗೆ ಕೋವಿಡ್ 19 ತಪಾಸಣೆ ಮಾಡಲಾಗಿದೆ.
Related Articles
Advertisement
ಡ್ರೋನ್ ಮೂಲಕ ಔಷಧ ಸಿಂಪಡಣೆ: ನಗರದಲ್ಲಿ ಸೀಲ್‌ಡೌನ್ ಪ್ರದೇಶಗಳು ಹಾಗೂ ಕಂಟೈನ್ಮೆಂಟ್ ವಲಯ ಹೆಚ್ಚಾಗುತ್ತಿದ್ದು, ಡ್ರೋನ್ ಮೂಲಕ ಔಷಧಿ ಸಿಂಪಡಿಸಲು ತಯಾರಿ ಆರಂಭವಾಗಿದ್ದು, ಮಲ್ಲೇಶ್ವರದಲ್ಲಿ ಭಾನುವಾರ ಔಷಧ ಸಿಂಪಡಣೆ ನಡೆಯಲಿದೆ.
ನಗರದಲ್ಲಿ ಕೋವಿಡ್‌ಗೆ ಮೂರು ಬಲಿ: ಬನಶಂಕರಿಯ ಡಾ.ಬಿ.ಆರ್. ಅಂಬೇಡ್ಕರ್ ತಾಂತ್ರಿಕ ಕಾಲೇಜಿನ 50 ವರ್ಷದ ಆಡಳಿತಾಧಿಕಾರಿ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜೂ 15 ರಂದು ಇವರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ತಗುಲಿರುವುದು ದೃಢವಾಗಿತ್ತು. ಅವರನ್ನು ಚಿಕಿತ್ಸೆಗೆ ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಿ, ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇನ್ನು ಅವರ ಪತ್ನಿಗೂ ಪಾಸಿಟಿವ್ ದೃಢವಾಗಿದ್ದು, ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಕ್ವಾರಂಟೈನ್‌ನಲ್ಲಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 83 ವರ್ಷದ ವೃದ್ಧೆ ಹಾಗೂ 70 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿರುವುದು ವರದಿಯಾಗಿದೆ.
ಮಹಾರಾಷ್ಟ್ರದಿಂದ ಬರುವವರಿಗೆ 7ದಿನ ಕ್ವಾರಂಟೈನ್ ಕಡ್ಡಾಯ: ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನ ಹೋಂ ಕ್ವಾರಂಟೈನ್ ಹಾಗೂ ಮಹಾರಾಷ್ಟ್ರ ಹೊರತು ಪಡಿಸಿ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ. ಕ್ವಾರಂಟೈನ್ ಸರ್ವೇಕ್ಷಣೆಯನ್ನು ತಂತ್ರಾಂಶದ ಮೂಲಕ ಮಾಡಲಾಗುತ್ತದೆ. ಈ ಸಂಬಂಧ ತಾಂತ್ರಿಕ ಅಪ್ಲಿಕೇಷನ್ ಮತ್ತು ಸರ್ವೇಕ್ಷಣಾ ತಂಡದ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿರು ತ್ತದೆ. ಅದೇ ರೀತಿ ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿರು ತ್ತದೆ ಎಂದು ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಕೆಎಸ್‌ಆರ್‌ಪಿಯಲ್ಲಿ 10 ಮಂದಿಗೆ ಪಾಸಿಟಿವ್: ಕೆಎಸ್‌ಆರ್‌ಪಿಯಲ್ಲಿ ಮತ್ತೆ ಕೋವಿಡ್ 19 ಕಾಣಿಸಿಕೊಂಡಿದ್ದು, ಶನಿವಾರ ಹತ್ತು ಮಂದಿಗೆ ಪಾಸಿಟಿವ್ ಬಂದಿದೆ. ಈ ಮೊದಲು ನಾಲ್ಕನೆ ಬೆಟಾಲಿಯನ್ ನಲ್ಲಿ 11 ಕೋವಿಡ್ 19 ಪ್ರಕರಣ ಪತ್ತೆಯಾಗಿತ್ತು. ಹೀಗಾಗಿ ಒಂದೇ ಆವರಣದಲ್ಲಿ ವಾಸವಾಗಿದ್ದ ಮೂರು ಮತ್ತು ನಾಲ್ಕನೇ ಬೆಟಾಲಿಯನ್ ನ ಸುಮಾರು 100 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಪರೀಕ್ಷೆಗೊಳಪಡಿಸಿದಾಗ ಮೂರನೇ ಬೆಟಾಲಿಯನ್ ನ ಹತ್ತು ಮಂದಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ವಸತಿ ಸಂಕೀರ್ಣ ಮತ್ತು ಕಮಾಂಡೆಂಟ್ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಔಷಧಿ ಸಿಂಪಡಿಸಲಾಗಿದೆ ಎಂದು ಕೆಎಸ್‌ಆರ್‌ಪಿ ಮೂಲಗಳು ತಿಳಿಸಿವೆ.
ಕೋವಿಡ್ 19 ಗೆದ್ದ 100ರ ವೃದ್ಧೆ: ರೋಗ ನಿರೋಧಕ ಶಕ್ತಿ ಹೊಂದಿರುವ ಯುವಜನತೆ ಸೋಂಕಿನಿಂದ ಮೃತಪಡುತ್ತಿದ್ದು, ಶನಿವಾರ 100 ವರ್ಷದ ವೃದ್ಧೆಯೊಬ್ಬರು ಕೋವಿಡ್ 19 ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ನೂರು ವರ್ಷದ ವೃದ್ಧೆಗೆ ಜೂ.15ರಂದು ಕೋವಿಡ್ 19 ಸೋಂಕು ದೃಢಪಟ್ಟಿತ್ತು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ದಾಖಲಾಗಿ ಕೇವಲ 9 ದಿನಗಳಲ್ಲೇ ಕೋವಿಡ್ 19 ವಿರುದಟಛಿ ಗೆದ್ದಿರುವ ಶತಾಯುಷಿ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.
495 ಕಂಟೈನ್ಮೆಂಟ್ ವಲಯ: ನಗರದಲ್ಲಿ ಕೋವಿಡ್ 19 ಸ್ಫೋಟಗೊಂಡಿದ್ದು, ಕಂಟೈನ್ಮೆಂಟ್ ವಲಯಗಳು ಹೆಚ್ಚಳವಾಗಿವೆ. 198 ವಾರ್ಡ್‌ಗಳಿಗೂ ಸೋಂಕು ಹರಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜೂ. 20 ರಂದು 437 ಕಂಟೈನ್ಮೆಂಟ್ ವಲಯಗಳಿದ್ದು, ಶನಿವಾರ ವೇಳೆಗೆ 495 ವಲಯ ಗುರತಿಸಲಾಗಿದೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಸೋಂಕಿತರು ಇರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.