Advertisement

ಆನ್ಲೈನ್  ಶಿಕ್ಷಣವನ್ನು ಪಡೆಯುತ್ತಿರುವುದು ಶೇ. 10.1ರಷ್ಟು ವಿದ್ಯಾರ್ಥಿಗಳು ಮಾತ್ರ : NCPCR

11:42 AM Jul 25, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕು ಎಲ್ಲಾ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಶಿಕ್ಷಣ ವ್ಯವಸ್ಥೆಯನ್ನಂತೂ ಸಂಪೂರ್ಣವಾಗಿ ಅಲುಗಾಡಿಸಿ ಬಿಟ್ಟಿದೆ. ಕೋವಿಡ್ ತಂದ ಸಂಕಷ್ಟ ಹಾಗೂ ಬಿಕ್ಕಟ್ಟು ಎಲ್ಲಾ ಭೌತಿಕ ವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ದೊಡ್ಡ ಪರಿಣಾಮ ಬೀರಿದ್ದು, ಎಲ್ಲಾ ಆನ್ ಲೈನ್ ಕೊಠಡಿಗಳಾಗಿ ಮಾರ್ಪಟ್ಟಿವೆ.

Advertisement

ಶಾಲಾ, ಕಾಲೇಜುಗಳಲ್ಲಿ ಕುಳಿಯು ವಿದ್ಯಾರ್ಜನೆಯನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಆನ್ ಲೈನ್ ಕೊಠಡಿಗಳಲ್ಲಿ ಪಾಠ ಕೇಳುವಂತಹ ಪರಿಸ್ಥಿತಿ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದು ಅನಿವಾರ್ಯಕ್ಕೆ ಬಂದಿದೆಯಾದರೂ, ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮವೇ ಜಾಸ್ತಿಯಾಗಿದೆ ಎಂದು ಅಧ್ಯಯನ ವರದರಿ ತಿಳಿಸಿದೆ.

ಇದನ್ನೂ ಓದಿ : ಯಾವುದೇ ಮೈತ್ರಿಯಿಲ್ಲದೆ ಚುನಾವಣಾ ಕಣಕ್ಕಿಳಿಯಲಿದ್ದೇವೆ  :  ಎಐಎಮ್ಐಎಮ್  

ಮಕ್ಕಳ ಹಕ್ಕುಗಳ ಸಂರಕ್ಷಣೆ ರಾಷ್ಟ್ರೀಯ ಆಯೋಗ (ಎನ್‌ ಸಿ ಪಿ ಸಿ ಆರ್) ಇತ್ತೀಚೆಗೆ ಮಾಡಿದ ಅಧ್ಯಯನದಲ್ಲಿ ಸುಮಾರು ಶೇಕಡಾ 59.2 ರಷ್ಟು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗಳನ್ನು ಮೆಸೆಜಿಂಗ್ ಮಾಡುವುದಕ್ಕೆ ಮಾತ್ರ ಬಳಸುತ್ತಿದ್ದಾರೆ ಹಾಗೂ ಕೇವಲ ಶೇಕಡಾ. 10.1 ರಷ್ಟು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಂಬಂಧಪಟ್ಟು ಹಾಗೂ ಇತರೆ ಕಲಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ಮಕ್ಕಳಿಂದ ಇಂಟರ್ ನೆಟ್ ಪ್ರವೇಶದೊಂದಿಗೆ ಮೊಬೈಲ್ ಫೋನ್ ಮತ್ತು ಇತರ ಸಾಧನಗಳನ್ನು ಬಳಸುವ ಪರಿಣಾಮಗಳು ಎಂಬ ಶೀರ್ಷಿಕೆಯಡಿಯಲ್ಲಿ  (ದೈಹಿಕ, ವರ್ತನೆ ಮತ್ತು ಮಾನಸಿಕ-ಸಾಮಾಜಿಕ) ಮಾಡಿದ ಅಧ್ಯಯನವು ಎಲ್ಲಾ ವಯಸ್ಸಿನ ಮಕ್ಕಳಲ್ಲಿ 30.2 ಶೇಕಡಾ ಮಕ್ಕಳು ತಮ್ಮದೇ ಆದ ಸ್ಮಾರ್ಟ್‌ ಫೋನ್‌ ಗಳನ್ನು ಹೊಂದಿದ್ದಾರೆ ಎಂದು ಹೇಳಿದೆ.

Advertisement

“ಇದು ಎಲ್ಲಾ ವಯೋಮಾನದ (8 ರಿಂದ 18 ವರ್ಷ ವಯಸ್ಸಿನ) ಶೇಕಡಾ 30.2 ರಷ್ಟು ಮಕ್ಕಳು ಈಗಾಗಲೇ ತಮ್ಮದೇ ಆದ ಸ್ಮಾರ್ಟ್‌ ಫೋನ್‌ ಗಳನ್ನು ಹೊಂದಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, 10 ವರ್ಷದವರಲ್ಲಿ ಶೇಕಡಾ 37.8 ರಷ್ಟು ಜನರು ಫೇಸ್‌ ಬುಕ್ ಖಾತೆಯನ್ನು ಹೊಂದಿದ್ದಾರೆ, ಮತ್ತು ಅದೇ ವಯಸ್ಸಿನವರಲ್ಲಿ 24.3 ಪ್ರತಿಶತದಷ್ಟು ಜನರು ಇನ್‌ ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದಾರೆ.  ಆದಾಗ್ಯೂ, ಅಂತರ್ಜಾಲವನ್ನು ಪ್ರವೇಶಿಸಲು ಲ್ಯಾಪ್‌ ಟಾಪ್‌ ಗಳು / ಟ್ಯಾಬ್ಲೆಟ್‌ ಗಳನ್ನು ಬಳಸುವ ಮಕ್ಕಳು ಎಲ್ಲಾ ವಯಸ್ಸಿನಲ್ಲೂ ಇದ್ದಾರೆ ಎಂದು ಹೇಳಿದ್ದಾರೆ.

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಈಶಾನ್ಯ ಪ್ರದೇಶಗಳು ಹಾಗೂ ದೇಶದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ 3,491 ಶಾಲೆಗೆ ಹೋಗುವ ಮಕ್ಕಳು 1,534 ಪೋಷಕರು, ಮತ್ತು ದೇಶದ ಆರು ರಾಜ್ಯಗಳ 60 ಶಾಲೆಗಳ 786 ಶಿಕ್ಷಕರು ಒಳಗೊಂಡಿದ್ದಾರೆ.

ಇನ್ನು,  ನಿದ್ರೆಗೆ ಮುನ್ನ ಮೊಬೈಲ್ ಬಳಕೆಯು ನಿದ್ರಾಹೀನತೆ, ನಿದ್ರಾಹೀನತೆ, ಆತಂಕ ಮತ್ತು ದಣಿವು ಮುಂತಾದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿ ತಿಳಿಸಿದೆ. 72.70 ರಷ್ಟು ಶಿಕ್ಷಕರಿಗೆ ಸ್ಮಾರ್ಟ್‌ ಫೋನ್‌ ಗಳನ್ನು ಬಳಸುವುದಕ್ಕೆ ಸರಿಯಾಗಿ ಗೊತ್ತಿಲ್ಲದವರು ಎಂದು ಅಧ್ಯಯನವು ಹೇಳಿದೆ.

ಇದನ್ನೂ ಓದಿ : ಟ್ರ್ಯಾಕ್ಟರ್ ನಲ್ಲಿ ಬಂದು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಚೆಲ್ಲಿದ ಶಾಸಕ ಅಭಯ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next