Advertisement
ಸರ್ಕಾರದಿಂದ ಸರ್ಕಾರಿ ಶಾಲೆಗಳಿಗೆ ಮಂಜೂರಾ ಗಿರುವ ಜಾಗ, ಜಾಮೀನು ಹಾಗೂ ಅನೇಕ ದಾನಿಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿ ರುವ ತಮ್ಮ ನಿವೇಶನ, ಜಾಗ, ಜಮೀನನ್ನು ಆಯಾ ಶಾಲೆ ಹೆಸರಿಗೆ ಖಾತೆ ಮಾಡಿಕೊಂಡು ಶಿಕ್ಷಣ ಸಂಸ್ಥೆ ಗಳ ಆಸ್ತಿ ಸಂರಕ್ಷಣಾ ಅಭಿಯಾನ ಹಲವು ವರ್ಷಗಳಿಂದ ಕೈಗೊಂಡಿದ್ದರೂ ಸಂಪೂರ್ಣ ಯಶಸ್ಸು ಸಾಧಿಸುವಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
Related Articles
Advertisement
111 ಸರ್ಕಾರಿ ಪ್ರೌಢ ಶಾಲೆಗಳಿದ್ದು ಆ ಪೈಕಿ ಕಳೆದ ವರ್ಷ 35 ಶಾಲೆಗೆ ಆಸ್ತಿ ನೋಂದಣಿ ಆಗಿದೆ. ಪ್ರಸ್ತುತ ವರ್ಷ 1 ಶಾಲೆಯ ಆಸ್ತಿ ನೋಂದಣಿ ಆಗಿದೆ. ಇಲ್ಲಿವರೆಗೂ ಒಟ್ಟು 72 ಶಾಲೆಗೆ ಆಸ್ತಿ ನೋಂದಣಿ ಆಗಿದ್ದು ಇನ್ನೂ 39 ಶಾಲೆ ಬಾಕಿದೆ. ಆ ಪೈಕಿ 2 ಕಡೆ ದಾನಿಗಳು ಜಾಗ ಕೊಟ್ಟಿದ್ದು 1 ಕಡೆ ಖಾಸಗಿ ಸ್ವತ್ತಿನಲ್ಲಿ ಶಾಲೆ ಇದೆ. 33 ಕಡೆ ಸರ್ಕಾರಿ ಜಾಗದಲ್ಲಿಯೇ ಶಾಲೆ ಇದೆ. ಇತರೇ 3 ಕಡೆ ಇದೆ. ಅದೇ ರೀತಿ ಜಿಲ್ಲಾದ್ಯಂತ 1,434 ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಆ ಪೈಕಿ ಕಳೆದ ವರ್ಷ 236 ಶಾಲೆಗೆ ನೋಂದಣಿ ಆಗಿದ್ದರೆ ಈ ವರ್ಷ 81 ಶಾಲೆಗಳಿಗೆ ನೋಂದಣಿ ಆಗಿದೆ. ಒಟ್ಟು ಇಲ್ಲಿವರೆಗೂ 902 ಶಾಲೆಗೆ ನೋಂದಣಿ ಆಗಿದ್ದು ಇನ್ನೂ 532 ಶಾಲೆ ಆಸ್ತಿ ನೋಂದಣಿ ಬಾಕಿ ಇದೆ. 1,434 ಶಾಲೆ ಪೈಕಿ 111 ಶಾಲೆಗೆ ದಾನಿಗಳು ಜಾಗ ಕೊಟ್ಟಿದ್ದಾರೆ. 38 ಶಾಲೆ ಖಾಸಗಿ ಸ್ವತ್ತು ಇವೆ. 366 ಕಡೆ ಸರ್ಕಾರಿ ಜಾಗದಲ್ಲಿವೆ. 17 ಇತರೆ ಕಡೆ ಇದೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಉದಯವಾಣಿಗೆ ಉಪ ನಿರ್ದೇಶಕರು ಹೇಳಿದ್ದೇನು?:
“ಉದಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಪಿ.ಬೈಲಾಂಜನಪ್ಪ, ಆಸ್ತಿ ನೋಂದಣಿ ಆಗದ 571 ಶಾಲೆ ಪಟ್ಟಿಯನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕಳುಹಿಸಿದ್ದು ಆಂದೋಲನದ ಮಾದರಿಯಲ್ಲಿ ಶಾಲೆಗಳ ಆಸ್ತಿಗಳ ನೋಂದಣಿ ಆಗಬೇ ಕೆಂದು ಈಗಾಗಲೇ ಸೂಚಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್ಟೇಟ್ ಅಧಿಕಾರಿಗಳಾ ಗಿದ್ದು ಆಯಾ ತಾಲೂಕು ದೈಹಿಕ ಶಿಕ್ಷಣ ಸಂಯೋಜಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಗ್ರಾಪಂ ಹಾಗೂ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಶಾಲೆಗಳಿಗೆ ಸೇರಿದ ಆಸ್ತಿಗಳಿಗೆ ಖಾತೆ ಮಾಡಿಸಿ ಸರ್ಕಾರಿ ಶಾಲೆಗಳ ಹಾಗೂ ಸರ್ಕಾರದ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣೆಗೆ ಸೂಚಿಸಲಾಗಿದೆ ಎಂದರು.
-ಕಾಗತಿ ನಾಗರಾಜಪ್ಪ