Advertisement

24ಗಂಟೆಯಲ್ಲಿ 571 ಪ್ರಕರಣ ಪತ್ತೆ; ದಿಲ್ಲಿಯಲ್ಲಿ ಕೋವಿಡ್ 19 ಪ್ರಕರಣ 11,659ಕ್ಕೆ ಏರಿಕೆ

05:51 PM May 21, 2020 | Nagendra Trasi |

ನವದೆಹಲಿ: ದೇಶಾದ್ಯಂತ ಕೋವಿಡ್ 19 ವೈರಸ್ ಪ್ರಕರಣ ಏರಿಕೆಯಾಗುತ್ತಿರುವ ಬೆನ್ನಲ್ಲೇ ದಿಲ್ಲಿಯಲ್ಲಿ ಒಂದೇ ದಿನ 571 ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ.

Advertisement

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಳೆದ 24ಗಂಟೆಯಲ್ಲಿ 571 ಪ್ರಕರಣ ಪತ್ತೆಯಾಗುವುದರ ಜತೆಗೆ ದಿಲ್ಲಿಯಲ್ಲಿ ಈವರೆಗೆ 11,659 ಪ್ರಕರಣ ವರದಿಯಾಗಿದೆ. ಸಾವಿನ ಸಂಖ್ಯೆ 194ಕ್ಕೆ ಏರಿಕೆಯಾಗಿದೆ.

ಬುಧವಾರ 24 ಗಂಟೆಯಲ್ಲಿ ದಿಲ್ಲಿಯಲ್ಲಿ 534 ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದ್ದು, ಮಂಗಳವಾರ 500 ಕೋವಿಡ್ 19 ಪ್ರಕರಣ ವರದಿಯಾಗಿತ್ತು.

ಈವರೆಗೆ ಒಟ್ಟು 5,567 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಮತ್ತೆ ಎರಡು ಪ್ರದೇಶಗಳನ್ನು ಕಂಟೈನ್ ಮೆಂಟ್ ವಲಯ ಎಂದು ಗುರುತಿಸಲಾಗಿದೆ. ದಕ್ಷಿಣ ದಿಲ್ಲಿಯ ಝಾಮ್ ರುಡ್ ಪುರ್ ಮತ್ತು ದಕ್ಷಿಣಾಪುರಿಯನ್ನು ಕಂಟೈನ್ ಮೆಂಟ್ ಎಂದು ಪಟ್ಟಿಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next