Advertisement

ಗೋವಾ : ಕಸ್ಟಮ್ ಅಧಿಕಾರಿಗಳು ಕಾರ್ಯಚರಣೆ : ಪ್ರಯಾಣಿಕನಿಂದ 57 ಲಕ್ಷ ರೂ ಮೌಲ್ಯದ ಬಂಗಾರ ವಶ

06:20 PM Jun 05, 2021 | Team Udayavani |

ಪಣಜಿ: ಗೋವಾ ದಾಬೋಲಿಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಕೇರಳ ಮೂಲದ ಪ್ರಯಾಣಿಕನಿಂದ 57 ಲಕ್ಷ ರೂ ಮೌಲ್ಯದ ಬಂಗಾರದ ಬಿಸ್ಕೀಟ್ ವಶಪಡಿಸಿಕೊಂಡಿದ್ದಾರೆ.

Advertisement

ಕಸ್ಟಮ್ ಸಹಾಯಕ ಆಯುಕ್ತ ವೈ.ಬಿ.ಸಹರೆ ನೇತೃತ್ವದ ಅಧಿಕಾರಿಗಳ ತಂಡ ಅಂತರಾಷ್ಟ್ರೀಯ ಪ್ರಯಾಣಿಕ ನವಾಸ್ (ಪೂರ್ಣ ಹೆಸರು ಬಹಿರಂಗಗೊಂಡಿಲ್ಲ) ಎಂಬ ಕೇರಳ ಕಾಸರಗೋಡು ನಿವಾಸಿ ಏರ್ ಅರೇಬಿಯಾ ವಿಮಾನ (ಜಿ9 492) ಮೂಲಕ ಶಾರ್ಜಾದಿಂದ ಗೋವಾಕ್ಕೆ ಬಂದಿಳಿದಿದ್ದ.

ಈತ 11 ಚಿನ್ನದ ಬಿಸ್ಕಿಟ್ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ. ಇದರ ಮೌಲ್ಯ ಸುಮಾರು 57.75 ಲಕ್ಷ ರೂಗಳಾಗಿದೆ. ಕಸ್ಟಮ್ ಅಧಿಕಾರಿಗಳು ನಡೆಸಿದ ತಪಾಸಣೆಯ ಸಂದರ್ಭದಲ್ಲಿ ಈತನ ಬಳಿ ಚಿನ್ನದ ಬಿಸ್ಕೀಟ್ ಪತ್ತೆಯಾಗಿದೆ. ಕಸ್ಟಮ್ ಅಧಿಕಾರಿಗಳು ಚಿನ್ನದ ಬಿಸ್ಕೀಟ್ ವಷಪಡಿಸಿಕೊಂಡಿದ್ದಾರೆ.

2021 ರ ಆರಂಭದಿಂದ ಇದುವರೆಗೂ ಗೋವಾ ಕಸ್ಟಮ್ ಅಧಿಕಾರಿಗಳು 2.89 ಕೋಟಿ ರೂ ಮೌಲ್ಯದ ಬಂಗಾರವನ್ನು ವಷಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next