ಬೆಂಗಳೂರು: ಪೈ ಇಂಟರ್‌ನ್ಯಾಷನಲ್ ಮೆಗಾ ಮಾನ್ಸೂನ್ ಮೇಳದ ಲಕ್ಕಿ ಡ್ರಾನಲ್ಲಿ 56,200 ಅದೃಷ್ಟಶಾಲಿ ಗ್ರಾಹಕರಿಗೆ ಒಟ್ಟು 4 ಕೋಟಿ ರೂ. ಮೌಲ್ಯದ ಬಹುಮಾನ ಲಭಿಸಿತು. ಮಾನ್ಸೂನ್ ಮೇಳ ಎಂಬ ಪರಿಕಲ್ಪನೆಯೊಂದಿಗೆ ಜೂ.1 ರಿಂದ ಸೆ.2ರವರೆಗೆ ಪೈ ಇಂಟರ್‌ನ್ಯಾಷನಲ್‌ನಲ್ಲಿ ಖರೀದಿಸಿದ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ನಿಗದಿಪಡಿಸಿ 10 ಲಕ್ಷ ಗ್ರಾಹಕರಿಗೆ ಕೂಪನ್‌ಗಳನ್ನು ವಿತರಿಸಲಾಗಿತ್ತು.
ಈ ಕೂಪನ್‌ಗಳ ಲಕ್ಕಿ ಡ್ರಾ ಭಾನುವಾರ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಿತು. ಅದೃಷ್ಟಶಾಲಿ ಕೂಪನ್ ಸಂಖ್ಯೆ ಗಳನ್ನು ಪುಟ್ಟ ಮಕ್ಕಳಿಂದ ಪಾರದರ್ಶಕವಾಗಿ ಬಿಡುಗಡೆ ಮಾಡಲಾಯಿತು. ಲಕ್ಕಿ ಡ್ರಾನ ಮೊದಲ ಬಹುಮಾನ ವಿಜೇತ ನೂರು ಗ್ರಾಹಕರು 50 ಸಾವಿರ ರೂ.,ದ್ವಿತೀಯ ಬಹುಮಾನ ವಿಜೇತ ನೂರು ಗ್ರಾಹಕರು 25 ಸಾವಿರ ರೂ. ಮತ್ತು ತೃತೀಯ ಬಹುಮಾನ ವಿಜೇತ ಒಂದು ಸಾವಿರ ಗ್ರಾಹಕರು 2,500 ಸಾವಿರ ರೂ.ಮೊತ್ತದ ವಸ್ತುಗಳನ್ನು ಪೈ ಇಂಟರ್‌ನ್ಯಾಷನಲ್ ಸೆಂಟರ್‌ಗಳಲ್ಲಿ ಉಚಿತ ವಾಗಿ ಖರೀದಿಸಬಹುದಾಗಿದೆ.
ಉಳಿದಂತೆ ನಾಲ್ಕನೆ ಬಹುಮಾನ ಪಡೆದ 5 ಸಾವಿರ ಗ್ರಾಹಕರು ಒಂದು ಸಾವಿರ ರೂ, ಹಾಗೂ ಐದನೇ ಬಹುಮಾನ ಗಳಿಸಿದ 50 ಸಾವಿರ ಗ್ರಾಹಕರು 500 ರೂ. ಮೌಲ್ಯದ ಶಾಪಿಂಗ್ ಕೂಪನ್ ಪಡೆದರು. ಈ ವೇಳೆ ಪೈ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಮಾತನಾಡಿ, ಗುಣಮಟ್ಟದ ಉತ್ಪನ್ನಗಳಿಗೆ ನಾವು ಆದ್ಯತೆ ನೀಡುತ್ತಿದ್ದೇವೆ. ಉಳಿದ ಕಂಪನಿಗಳಿಗಿಂತ ಪೈ ಸಂಸ್ಥೆ ಗ್ರಾಹಕರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಹೇಳಿದರು.
19 ವರ್ಷಗಳ ಹಿಂದೆ ಇಂದಿರಾನಗರದಲ್ಲಿ ಪೈ ಇಂಟರ್‌ನ್ಯಾಷನಲ್ ಮೊದಲ ಮಳಿಗೆ ಪ್ರಾರಂಭವಾಯಿತು. ಇಂದು ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಒಟ್ಟು 217 ಮಳಿಗೆಗಳಿವೆ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲೂ ಮಳಿಗೆ ತೆರೆಯುತ್ತಿದ್ದೇವೆ. ಸಂಸ್ಥೆ 2018 – 19ನೇ ಸಾಲಿನಲ್ಲಿ 1,400 ಕೋಟಿ ವಹಿವಾಟು ಹೊಂದಿದ್ದು, ಪ್ರಸ್ತಕ ಸಾಲಿನಲ್ಲಿ ವಹಿವಾಟು 2,277 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ.
ಪರಿಸರ ಸಂರಕ್ಷಣೆ ಉದ್ದೇಶದಿಂದ ನಾಡಿನಾದ್ಯಂತ ಒಂದು ಕೋಟಿ ಸಸಿ ನೆಡುವ ಆಶಯವನ್ನು ಪೈ ಸಂಸ್ಥೆ ಹೊಂದಿದೆ ಎಂದು ತಿಳಿಸಿದರು. ಪ್ರಸ್ತುತ ಪಾರದರ್ಶಕ ರೀತಿಯಲ್ಲಿ ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಲಕ್ಕಿ ಡ್ರಾ ಮುಂದುವರಿಯಲಿದ್ದು, ಇನ್ನು ಈ ಬಾರಿ ಲಕ್ಕಿ ಡ್ರಾ ವಿಜೇತರ ಹೆಸರು, ವಿಳಾಸ ಹಾಗೂ ಬಹುಮಾನದ ಮಾಹಿತಿಗಳು ಎಲ್ಲ ಪೈ ಇಂಟರ್‌ನ್ಯಾಷನಲ್ ಮಳಿಗೆಗಳಲ್ಲಿ ಹಾಗೂ ಸಂಸ್ಥೆಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತೇವೆ ಎಂದರು.
ಕಳೆದ ಎರಡು ವಾರಗಳ ಹಿಂದೆ ಅರಕೆರೆ ಗೇಟ್ ಬಳಿಯ ಪೈ ಇಂಟರ್‌ನ್ಯಾಷನಲ್‌ನಲ್ಲಿ ವಸ್ತುಗಳನ್ನು ಖರೀಸಿದಿದ್ದೆ. ಆಗ ಮಾನ್ಸೂನ್ ಮೇಳ ಕೂಪನ್ ಕೊಟ್ಟಿದ್ದರು. ನಂಬಿಕೆ ಮೇಲೆ ಲಕ್ಕಿ ಡ್ರಾ ಕಾರ್ಯಕ್ರಮ ಭಾಗಿಯಾಗಿದ್ದೆ. 50 ಸಾವಿರ ಬಹುಮಾನ ಲಭಿಸಿದ್ದು, ನಿಜಕ್ಕೂ ಸಂತಸವಾಗಿದೆ.
-ಸುಧೀರ್, ಅದೃಷ್ಟಶಾಲಿ ಗ್ರಾಹಕ