Advertisement

Himachal Pradesh: ಭಾರತೀಯ ವಾಯುಪಡೆ ವಿಮಾನ ಪತನಗೊಂಡು 56 ವರ್ಷಗಳ ಬಳಿಕ 4 ಮೃತದೇಹ ಶೋಧ

10:15 AM Oct 01, 2024 | Team Udayavani |

ಹಿಮಾಚಲ ಪ್ರದೇಶ: 102 ಜನರಿದ್ದ ಭಾರತೀಯ ವಾಯುಪಡೆಯ (ಐಎಎಫ್) ವಿಮಾನವೊಂದು ರೋಹ್ಟಾಂಗ್ ಪಾಸ್‌ನಲ್ಲಿ ಪತನಗೊಂಡ ಐವತ್ತಾರು ವರ್ಷಗಳ ಬಳಿಕ ಭಾರತೀಯ ಸೇನೆಯು ಹಿಮಾಚಲ ಪ್ರದೇಶದ ಅಪಘಾತದ ಸ್ಥಳದಿಂದ ಮತ್ತೆ ನಾಲ್ಕು ಶವಗಳನ್ನು ಯಶಸ್ವಿಯಾಗಿ ಹೊರತೆಗೆದಿದೆ.

Advertisement

ಫೆಬ್ರವರಿ 7, 1968 ರಂದು 102 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಎಎನ್-12 ವಿಮಾನವು ಚಂಡೀಗಢದಿಂದ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಪತನಗೊಂಡಿತ್ತು. ಇದಾದ ಬಳಿಕ ರೋಹ್ಟಾಂಗ್ ಪಾಸ್ ಬಳಿ ಪತನಗೊಂಡ ವಿಮಾನವನ್ನು ಪತ್ತೆ ಹಚ್ಚಿದ ಭಾರತೀಯ ಸೇನೆ 102 ದೇಹಗಳ ಪಾಲಿಕೆ ಕೆಲ ದೇಹಗಳನ್ನು ಪತ್ತೆ ಹಚ್ಚಿತ್ತು ಹಿಮದಿಂದ ಕೂಡಿದ ಪ್ರದೇಶವಾಗಿದ್ದರಿಂದ ವಿಮಾನದ ಅವಶೇಷಗಳು ಹಿಮದಲ್ಲಿ ಹುದುಗಿದ್ದರಿಂದ ದೇಹಗಳನ್ನು ಪತ್ತೆಹಚ್ಚಲು ಕಷ್ಟಸಾಧ್ಯವಾಗಿತ್ತು. ಅಂದಿನಿಂದ ಉಳಿದ ದೇಹಗಳ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಹಿಮದಿಂದ ಸಮಾಧಿಯಾಗಿದ್ದ ಮೃತದೇಹಗಳು:
1968 ರಲ್ಲಿ ರೋಹ್ಟಾಂಗ್ ಪಾಸ್ ನಲ್ಲಿ ಪತನಗೊಂಡ AN-12 ವಿಮಾನದಿಂದ ಸಿಬ್ಬಂದಿಗಳ ಕಳೇಬರವನ್ನು ಪತ್ತೆಹಚ್ಚುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಎಂದು ಅಧಿಕಾರಿಯೊಬ್ಬರು ಹೇಳಿದರು. 2003 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ ಪರ್ವತಾ ಆರೋಹಿಗಳು ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ್ದರು. ಇದಾದ ಬಳಿಕ ಸೇನೆ ಮತ್ತು ಡೋಗ್ರಾ ಸ್ಕೌಟ್ಸ್ ತಂಡ 2005, 2006, 2013 ಮತ್ತು 2019 ರವರೆಗೆ ನಿರಂತರ ಶೋಧ ಕಾರ್ಯಾಚರಣೆ ನಡೆಸಿತ್ತು ಈ ವೇಳೆ ಕೇವಲ ಐದು ಮೃತದೇಹಗಳನ್ನು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಆದರೆ ಇದೀಗ ಚಂದ್ರ ಭಾಗಾ ಪರ್ವತ ಪ್ರದೇಶಗಳಲ್ಲಿ ನಾಲ್ಕು ಹೆಚ್ಚುವರಿ ದೇಹಗಳನ್ನು ವಶಪಡಿಸಿಕೊಂಡಿದೆ ಇದರೊಂದಿಗೆ ಪತ್ತೆಯಾದ ಮೃತದೇಹಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಪತ್ತೆಯಾದ ನಾಲ್ವರ ಮೃತದೇಹಗಳ ಪೈಕಿ ಮೂವರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: Arrestted: ಕಾಲು ತುಳಿದಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ ಯುವಕನ ಸೆರೆ!

Advertisement

Udayavani is now on Telegram. Click here to join our channel and stay updated with the latest news.

Next