ಮಧ್ಯ ಪ್ರದೇಶ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಐಸ್‌ಕ್ರೀಮ್ ಸೇವಿಸಿ 55 ಮಂದಿ ಅಸ್ವಸ್ಥರಾಗಿರುವ ಘಟನೆ ಮದ್ಯಪ್ರದೇಶದ ಖರ್‌ಗೋನ್ ಜಿಲ್ಲೆಯಲ್ಲಿ ನಡೆದಿದೆ.
ಐಸ್‌ಕ್ರೀಮ್ ಸೇವಿಸಿ ಅಸ್ವಸ್ಥರಾಗಿರುವ 55 ಮಂದಿಯ ಪೈಕಿ 25 ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐಸ್‌ಕ್ರೀಮ್ ಸ್ಯಾಂಪಲ್‌ಗಳನ್ನು ಟೆಸ್ಟ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿನೇಶ್ ಖುಷ್‌ವಾಹ ಎಂಬ ಸ್ಥಳಿಯ ವ್ಯಕ್ತಿಯೊಬ್ಬ ತಯಾರಿಸಿ ಮಾರಾಟ ಮಾಡಿದ್ದ ಐಸ್‌ಕ್ರೀಮ್‌ಗಳನ್ನು ಅಸ್ವಸ್ಥಗೊಂಡವರು ಸೇವಿಸಿದ್ದಾಗಿ ಹೇಳಲಾಗಿದೆ.
ಬುಧವಾರ ರಾತ್ರಿ ಚತ್ತಾಲ್ ಎಂಬ ಗ್ರಾಮದಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ಅಸ್ವಸ್ಥರಾದ ಎಲ್ಲರ ಆರೋಗ್ಯದ ಬಗ್ಗೆ ಯೂ ತೀವ್ರ ನಿಗಾ ವಹಿಸಲಾಗಿದೆ ಎಂದು ಖರ್‌ಗೋನ್ ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ. ದೌಲತ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
10 ಸಿಬಂದಿಯನ್ನು ಹೊತ್ತೊಯ್ಯುತ್ತಿದ್ದ ಜಪಾನಿನ army helicopter ನಾಪತ್ತೆ