Advertisement
ಬೆಳಗ್ಗೆ 9ರಿಂದ ಕ್ರೀಡಾಕೂಟವನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಎಸ್. ರಾವ್ ಉದ್ಘಾಟಿಸಿದರು. ಕ್ರೀಡೋತ್ಸವದ ಪ್ರಮುಖ ಪ್ರಾಯೋಜಕತ್ವವನ್ನು ರಿಲಾಯನ್ಸ್ ಗ್ರೂಪ್‌ನ ಉಪಾಧ್ಯಕ್ಷರಾದ ವಿಶ್ವಾಸ್ ಅತ್ತಾವರ ಅವರ ನೇತೃತ್ವದಲ್ಲಿ ರಿಲಾಯನ್ಸ್ ಗ್ರೂಪ್ ವಹಿಸಿಕೊಂಡಿತ್ತು. ಸೀತಾ ಬುಕ್ಸ್ ಆ್ಯಂಡ್ ಪಬ್ಲಿಷರ್ಸ್ ಮುಖ್ಯಸ್ಥ ಸುರೇಶ್ ರಾವ್ ಇವರು ಪ್ರಾಯೋಜಕರಾಗಿ ಸಹಕರಿಸಿದರು. ಸಮಾಜದ 3 ವರ್ಷದಿಂದ 60 ವರ್ಷ ಮತ್ತು 60 ವರ್ಷ ಮೇಲ್ಪಟ್ಟವರಿಗೂ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಉದ್ದ ಜಿಗಿತ, ಗುಂಡೆಸೆತ, ರನ್ನಿಂಗ್, ಬಾಲ್ ಎಸೆತ, ವೇಗದ ನಡಿಗೆ ಸ್ಪರ್ದೆ, ಹಗ್ಗಜಗ್ಗಾಟ, ರಿಲೆ ಓಟ, ಚಾಕ್ಲೆಟ್ ಪಿಕ್ಕಿಂಗ್, ಬಾಲ್ ಕಲೆಕ್ಟಿಂಗ್ ಓಟ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು.
Related Articles
Advertisement
ಕ್ರೀಡಾ ಉದ್ಘೋಷಕರಾಗಿ ಗಿರೀಶ್ ದೇವಾಡಿಗ, ಡಾ| ರೇಖಾ ದೇವಾಡಿಗ ಮತ್ತು ಸತೀಶ್ ಕಣ್ವತೀರ್ಥ ಇವರು ನೆರವೇರಿಸಿದರು. ಸಂಘದ ಸದ್ಯಸರಾದ ಅಶೋಕ ದೇವಾಡಿಗ, ಸತೀಶ್ ಮೊಯಿಲಿ, ವನಿತಾ ದೇವಾಡಿಗ, ಭಾಸ್ಕರ ದೇವಾಡಿಗ, ಹರೀಶ್ ದೇವಾಡಿಗ ಡೊಂಬಿವಿಲಿ, ಹರೀಶ್ ದೇವಾಡಿಗ ಅಸಲ#, ರೋಶನ್ ದೇವಾಡಿಗ, ರೋಹಿತ್ ದೇವಾಡಿಗ, ರಘು ಮೊಯಿಲಿ, ವಿಜಯ್ ದೇವಾಡಿಗ, ಹೇಮಲತಾ ದೇವಾಡಿಗ, ಗಣೇಶ್ ದೇವಾಡಿಗ, ಸುರೇಖಾ ದೇವಾಡಿಗ, ಹೇಮನಾಥ್ ದೇವಾಡಿಗ ಇವರು ತೀರ್ಪುಗಾರರಾಗಿ ಸಹಕರಿಸಿದರು.ಸಮಾರೋಪ ಸಮಾರಂಭವನ್ನು ಸಂಘದ ಗೌರವ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ, ಕ್ರೀಡಾ ಕಾರ್ಯಾಧ್ಯಕ್ಷೆ ಜಯಂತಿ ದೇವಾಡಿಗ, ಉಪಾಕಾರ್ಯಾಧ್ಯಕ್ಷ ಸುರೇಶ್ ದೇವಾಡಿಗ, ಕಾರ್ಯದರ್ಶಿ ಮೋಹನ್‌ದಾಸ್ ಗುಜರನ್, ಉಪಕಾರ್ಯದರ್ಶಿ ನಿತೇಶ್ ದೇವಾಡಿಗ ಮತ್ತು ಅಕ್ಷಯ ದೇವಾಡಿಗರು ನೆರವೇರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ವೈಯಕ್ತಿಕ ಚಾಂಪಿಯನ್ ಆಗಿ 16 ವರ್ಷದ ಕೆಳಗಿನ ಹುಡುಗರ ವಿಭಾಗದಲ್ಲಿ ದೀವೆಶ್ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಭೂಮಿಕಾ ದೇವಾಡಿಗ, 22 ವರ್ಷದ ಕೆಳಗಿನ ಹುಡುಗರ ವಿಭಾಗದಲ್ಲಿ ವಿಶಾಲ್ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಹರ್ಷ ದೇವಾಡಿಗ, 30 ವರ್ಷದ ಕೆಳಗಿನ ಹುಡುಗರ ವಿಭಾಗದಲ್ಲಿ ಆತಿಶ್ ಶೇರಿಗಾರ್ ಹಾಗೂ ಹುಡುಗಿಯರ ವಿಭಾಗದಲ್ಲಿ ಸ್ವಾತಿ ಎಸ್. ದೇವಾಡಿಗ ಮತ್ತು 40 ವರ್ಷದ ಕೆಳಗಿನ ಹುಡುಗರ ವಿಭಾಗದಲ್ಲಿ ಕಿರಣ್ ಆರ್. ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಸುಲೋಚನಾ ಶೇರಿಗಾರ್ ಪಡೆದುಕೊಂಡರು.