Advertisement

54th IFFI ಗೆ ಚಾಲನೆ: ಮಾಧುರಿ ದೀಕ್ಷಿತ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

09:30 PM Nov 20, 2023 | Team Udayavani |

ಪಣಜಿ: ಗೋವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಟನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ 2023 ಕ್ಕೆ ಸೋಮವಾರ ಚಾಲನೆ ದೊರಕಿದ್ದು, ಪ್ರಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರಿಗೆ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆಯಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ಅದ್ದೂರಿ ಸಮಾರಂಭದಲ್ಲಿ 2023 ರ ಫಿಲ್ಮ್ ಗಾಲಾ ಆವೃತ್ತಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಚಾಲನೆ ನೀಡಿ ಮಾಧುರಿ ದೀಕ್ಷಿತ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಧುರಿ ದೀಕ್ಷಿತ್, ಇಫಿ ಎಂದರೆ ಅದು ಭಾವನೆಗಳ‌ ವಲಯ. ಸಿನಿಮಾ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ದೀಕ್ಷಿತ್ ಅವರ ಚಾರ್ಟ್‌ಬಸ್ಟರ್ ಹಾಡುಗಳ ಸಂಯೋಜನೆಯನ್ನು ಸಹ ಪ್ರದರ್ಶಿಸಲಾಯಿತು.56 ರ ಹರೆಯದ ನಟಿ ಜನಮಾನಸದಲ್ಲಿ ನೆಲೆಯಾಗಿರುವ ಹಾಡುಗಳಿಗೆ ಹೆಜ್ಜೆ ಹಾಕಿ ಕಣ್ಮನ ಸೆಳೆದರು.

Advertisement

“ಯುಗಗಳಾದ್ಯಂತ ಐಕಾನ್,ಮಾಧುರಿ ದೀಕ್ಷಿತ್ ನಾಲ್ಕುದಶಕಗಳಿಂದ ಅದ್ಭುತ ಅಪ್ರತಿಮ ಪ್ರತಿಭೆಯೊಂದಿಗೆ ನಮ್ಮ ಪರದೆಯನ್ನು ಅಲಂಕರಿಸಿದ್ದಾರೆ. ನಿಶಾದಿಂದ ಹಿಡಿದು ಮನಮೋಹಕ ಚಂದ್ರಮುಖಿಯವರೆಗೆ, ಭವ್ಯವಾದ ಬೇಗಂ ಪಾರಾ, ಅದಮ್ಯ ರಜ್ಜೋವರೆಗೆ, ಅವರ ಬಹುಮುಖ ಪ್ರತಿಭೆಗೆ ಯಾವುದೇ ಮಿತಿಯಿಲ್ಲ.ಇಂದು, ನಾವು 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದಲ್ಲಿ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸಿದ ಪ್ರತಿಭಾವಂತ, ವರ್ಚಸ್ವಿ ನಟಿಗೆ ‘ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ‘ವಿಶೇಷ ಮನ್ನಣೆ’ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಅಸಾಧಾರಣ ಪ್ರಯಾಣದ ಆಚರಣೆ, ಶಾಶ್ವತ ಪರಂಪರೆಗೆ ಗೌರವ”ಎಂದು ಸಚಿವ ಅನುರಾಗ್ ಠಾಕೂರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next