Advertisement

ಇ-ಮೆಗಾ ಲೋಕ್‌ ಅದಾಲತ್‌ನಲ್ಲಿ 5,480 ಪ್ರಕರಣ ಇತ್ಯರ್ಥ

06:27 PM Sep 22, 2020 | Suhan S |

ರಾಯಚೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ನಡೆಸಿದ ಇ-ಮೆಗಾ ಲೋಕ್‌ ಅದಾಲತ್‌ನಲ್ಲಿ 5,480 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಹುಸೇನ್‌ ತಿಳಿಸಿದ್ದಾರೆ.

Advertisement

ಇ-ಮೆಗಾ ಲೋಕ್‌ ಅದಾಲತ್‌ನಲ್ಲಿ 6,287 ಅರ್ಜಿ ಸಲ್ಲಿಕೆಯಾಗಿದ್ದು, 5,480 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು 5.80 ಕೋಟಿ ರೂ. ಮೊತ್ತ ಪ್ರಕರಣಗಳು ಬಗೆ ಹರಿದಿವೆ. ವಿವಿಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಜಿಲ್ಲೆಯ ಪೊಲೀಸರ ಸಹಕಾರದಿಂದ 485 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ನ್ಯಾಯಾ ಧೀಶರು, ವಕೀಲರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗ ಮತ್ತು ಪೊಲೀಸರು ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣಗಳ ಇತ್ಯರ್ಥದಲ್ಲಿ ರಾಜ್ಯದಲ್ಲಿ ಜಿಲ್ಲೆ 7ನೇ ಸ್ಥಾನದಲ್ಲಿದೆ. ಶೇ.16.1ರಷ್ಟು ಸಾಧನೆಯಾಗಿದೆ. ಡಿ.12ರಂದು ರಾಷ್ಟ್ರೀಯ ಇ-ಮೆಗಾ ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಏಕಕಾಲಕ್ಕೆ ನಡೆಯಲಿದೆ. ಈ ಕುರಿತು ಈಗಾಗಲೇ ಎಲ್ಲ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಲೋಕ್‌ ಅದಾಲತ್‌ ನಲ್ಲಿ ಅತಿ ಹೆಚ್ಚಾಗಿ ಕ್ರಿಮಿನಲ್‌, ರಸ್ತೆ ಅಪಘಾತ, ಚೆಕ್‌ ಬೌನ್ಸ್‌ ಮತ್ತು ಜನ್ಮದಿನಾಂಕ ಪ್ರಮಾಣ ಪತ್ರಗಳಿಗೆ ಸಂಬಂಧಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಲಾಗುವುದು ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next