Advertisement
ಗ್ರಾಮದಲ್ಲಿ 70 ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಈ ರಸ್ತೆ ಮೂಲಕ ಮಳೆಗಾಲದಲ್ಲಿ ದೊಡ್ಡ ಹೆಜ್ಜೂರಿನ ರಸ್ತೆಯಿಂದ ಕಪ್ಪನಕಟ್ಟೆ ಹಾಡಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದ್ದರು. ಮೂರು ವರ್ಷಗಳ ಹಿಂದೆಯೇ ಯೋಜನೆ ಮಂಜೂರಾಗಿದ್ದರೂ ಕೊವಿಡ್-೧೯ನಿಂದಾಗಿ ಅನುದಾನ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಒತ್ತಡ ಹಾಕಿದ ಪರಿಣಾಮ ಈ ರಸ್ತೆ ಡಾಂಬರೀಕರಣಗೊಳ್ಳುತ್ತಿದೆ. ಹಾಡಿಯ ಪಕ್ಕದಲ್ಲಿರುವ ರಕ್ತನ ಕೆರೆ ರಸ್ತೆ ಮೆಟ್ಲಿಂಗ್ ಮಾಡಲಾಗುವುದು. ಈ ಹಾಡಿಯ ಹಾಗೂ ರೈತರ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ಇದೆ. ಈ ರಸ್ತೆ ಕಾಮಗಾರಿ ನಡೆಯುವ ವೇಳೆ ರಸ್ತೆ ಒತ್ತುವರಿ ಮಾಡಿಕೊಂಡಿರುವವರು ತೆರವುಗೊಳಿಸಿ ಸಮರ್ಪಕ ರಸ್ತೆ ನಿರ್ಮಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿ, ನಾಲ್ಕು ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ತಾಕೀತು ಮಾಡಿದರು.
ಇದೇ ವೇಳೆ ಕಪ್ಪನಕಟ್ಟೆ ಹಾಡಿಯಯಲ್ಲಿ ನಿರ್ಮಿಸಲುದ್ದೇಶಿಸಿರುವ ೧೫ ಲಕ್ಷರೂ ವೆಚ್ಚದ ಹೈಟೆಕ್ ಅಂಗವನಾಡಿ, ೧೦ ಲಕ್ಷರೂ ವೆಚ್ಚದ ಸಮುದಾಯ ಭವನ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿದ ಅವರು ಹಾಡಿಯ ಮಹಿಳೆಯರೊಂದಿಗೆ ಚರ್ಚಿಸಿದ ವೇಳೆ ಮನೆಗಳು ದುರಸ್ಥಿಗೊಂಡಿದೆ, ಹಲವರಿಗೆ ಮನೆಯೇ ಇಲ್ಲ. ಮಂಜೂರು ಮಾಡಿಸುವಂತೆ ಕೋರಿದರು. 541 ಮನೆ ಮಂಜೂರು
ಐಟಿಡಿಪಿ ಯೋಜನೆಯಡಿ ತಾಲೂಕಿನ ಆದಿವಾಸಿಗಳಿಗಾಗಿ ೫೪೧ ಮನೆ ಮಂಜೂರಾಗಿದ್ದು, ಈ ಪೈಕಿ ೬೦ ಮನೆಗಳು ತಿರಸ್ಕೃತಗೊಂಡಿವೆ. ವಸತಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ರಾಜೀವಗಾಂಧಿ ವಸತಿ ನಿಗಮದವತಿಯಿಂದ ೪ ಲಕ್ಷರೂ ಅನುದಾನ ನೀಡುತ್ತಿದ್ದು, ಪ್ರಾಯೋಗಿಕವಾಗಿ ಮನೆ ನಿರ್ಮಿಸಿಕೊಡಲಾಗುವುದೆಂದರು.
Related Articles
Advertisement