Advertisement

German ಮಿಲಿಟರಿ ಅಧಿಕಾರಿ ಎಂದು ಪೇತ್ರಿಯ ಮಹಿಳೆಗೆ 54 ಲಕ್ಷ ರೂ. ವಂಚನೆ!

05:47 PM Mar 10, 2024 | Team Udayavani |

ಉಡುಪಿ: ಸಾಮಾಜಿಕ ತಾಣದಲ್ಲಿ ಪರಿಚಯವಾದ ವಂಚಕನೊಬ್ಬ ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು ವಂಚಿಸಿ ಬ್ರಹ್ಮಾವರದ ಪೇತ್ರಿಯ ಮಹಿಳೆಯೊಬ್ಬರಿಗೆ 54 ಲಕ್ಷ 74 ಸಾವಿರ ರೂ. ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಫೆಬ್ರವರಿ 10 ರಂದು ಫೇಸ್‌ಬುಕ್‌ನಲ್ಲಿ ಮಿಹಿಯಾಲ್ ನೀಲ್ಗೆನ್ ಎಂಬಾತ ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಪೇತ್ರಿಯ ಲವೀನಾ ಸ್ಟೆಫನಿ ಕ್ರಾಸ್ಟೊ (42) ಎಂಬವರ ಸ್ನೇಹ ಬೆಳೆಸಿಕೊಂಡಿದ್ದಾನೆ.

ಪರಿಚಯವಾದ ನಂತರ ಎಕ್ಸ್( ವಾಟ್ಸ್ಅಪ್) ಮುಖೇನ ಚಾಟಿಂಗ್ ನಡೆಸಿ ಸ್ನೇಹಿತರಾಗಿದ್ದಾರೆ. ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಫೆ.1 ರಂದು, ದೆಹಲಿಯ ಪಾರ್ಸೆಲ್ ಆಫೀಸ್‌ನಿಂದ ಎಂಬುದಾಗಿ ಅಪರಿಚಿತ ವ್ಯಕ್ತಿ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಜರ್ಮನಿಯಿಂದ ಬಂದಿರುವ ಪಾರ್ಸೆಲ್ ನಲ್ಲಿ ಜ್ಯುವೆಲರಿ, ಯುರೋ ಕರೆನ್ಸಿ ಇದ್ದು ಈ ಬಗ್ಗೆ ಪಾರ್ಸೆಲ್ ಪಡೆಯಲು ಪಾರ್ಸೆಲ್ ಚಾರ್ಜ್‌, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ.

ಲವೀನಾ ಅದನ್ನು ನಂಬಿ, ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ, ಗೂಗಲ್ ಪೇ ಗಳಿಗೆ ಹಂತ ಹಂತವಾಗಿ ಒಟ್ಟು 54 ಲಕ್ಷದ 74 ಸಾವಿರ ಹಣವನ್ನು ಪಾವತಿಸಿದ್ದಾರೆ. ಆರೋಪಿ ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು, ಗಿಫ್ಟ್ ಪಾರ್ಸೆಲ್ ಕಳಿಸುವುದಾಗಿ ನಂಬಿಸಿ, ಪಾರ್ಸೆಲ್ ಪಡೆಯಲು ಭಾರೀ ಪ್ರಮಾಣದ ಹಣವನ್ನು ಪಡೆದು, ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next