Advertisement

Kalyan ರೈಲು ನಿಲ್ದಾಣದಲ್ಲಿ ಎರಡು ಬಾಕ್ಸ್‌ಗಳಲ್ಲಿ 54 ಡಿಟೋನೇಟರ್‌ಗಳು ಪತ್ತೆ

07:46 PM Feb 21, 2024 | Team Udayavani |

ಥಾಣೆ: ಇಲ್ಲಿನ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಬುಧವಾರ ಎರಡು ಬಾಕ್ಸ್‌ಗಳಲ್ಲಿ 50 ಕ್ಕೂ ಹೆಚ್ಚು ಡಿಟೋನೇಟರ್‌ಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಪತ್ತೆ ಮಾಡಲಾಗಿದೆ ಎಂದುರಿ ರೈಲ್ವೇ ಪೊಲೀಸ್ (GRP) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸೆಂಟ್ರಲ್ ರೈಲ್ವೇ (CR) ಮಾರ್ಗದಲ್ಲಿ ಸಾಮಾನ್ಯವಾಗಿ ಜನಸಂದಣಿ ಇರುವ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1 ನಲ್ಲಿ ಗಮನಿಸದೆ ಬಿದ್ದಿರುವ ಬಾಕ್ಸ್‌ಗಳನ್ನು ರೈಲ್ವೆ ಪೊಲೀಸ್ ಗಮನಿಸಿದ್ದು, ನಂತರ ಶ್ವಾನ ದಳ ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (ಬಿಡಿಡಿಎಸ್) ಸಿಬಂದಿಯನ್ನು ತತ್ ಕ್ಷಣವೇ ಸ್ಥಳಕ್ಕೆ ಕರೆಸಲಾಗಿದೆ.

ಬಿಡಿಡಿಎಸ್ ತಂಡವು ಪೆಟ್ಟಿಗೆಗಳನ್ನುತೆರೆದಾಗ ಅವುಗಳಲ್ಲಿ 54 ಡಿಟೋನೇಟರ್‌ಗಳು (ಸಣ್ಣ ಪ್ರಮಾಣದ ಸ್ಫೋಟಕವನ್ನು ಒಳಗೊಂಡಿರುವ ಸಾಧನ) ಕಂಡುಬಂದಿವೆ. ಇನ್ನೂ ಪ್ರಕರಣ ದಾಖಲಿಸಿಕೊಳ್ಳದಿದ್ದರೂ ಕಲ್ಯಾಣ್ ರೈಲ್ವೇ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದೆ.

ಡಿಟೋನೇಟರ್‌ಗಳು ಪತ್ತೆಯಾದ ಸ್ಥಳಕ್ಕೆ ಥಾಣೆ ನಗರ ಪೊಲೀಸರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಥಾಣೆ ಜಿಲ್ಲೆಯಲ್ಲಿ ಅಕ್ರಮವಾಗಿ ಕೆರೆಗಳಲ್ಲಿ ಮೀನು ಹಿಡಿಯಲು ಮತ್ತು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಕಾರ್ಯಾಚರಣೆಗಳನ್ನು ನಡೆಸಲು ಡಿಟೋನೇಟರ್‌ಗಳನ್ನು ಬಳಸಲಾಗುತ್ತದೆ.ಆಘಾತ ತರಂಗಗಳ ಮೂಲಕ ಮೀನುಗಳನ್ನು ಸಾಯಿಸಿ ಸಂಗ್ರಹಿಸಲಾಗುತ್ತದೆ.

ಮುಂಬೈ ನಗರದ ಹೊರವಲಯದಲ್ಲಿರುವ ಕಲ್ಯಾಣ್ ರೈಲು ನಿಲ್ದಾಣವು ದೂರದ ಮತ್ತು ಉಪನಗರ ರೈಲುಗಳ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ ಮತ್ತು ಸಾಮಾನ್ಯವಾಗಿ ಭಾರೀ ಜನದಟ್ಟಣೆಯಿಂದ ಕೂಡಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next