ಮಲ್ಪೆ: ಮೀನುಗಾರರು ನಾಪತ್ತೆಯಾಗಿ 53 ದಿನ ಕಳೆದಿದ್ದು, ಯಾವುದೇ ಮಾಹಿತಿ ಸಿಗುತ್ತಿಲ್ಲ. ಇದೇ ರೀತಿಯ ಮೌನ ಮುಂದುವರಿದರೆ ಮತ್ತೆ ಉಗ್ರ ಬೀದಿಗಿಳಿದು ಪ್ರತಿಭಟಿಸುವುದಾಗಿ ನಾಪತ್ತೆಯಾದ ಮೀನುಗಾರ ಮನೆಯವರು ಎಚ್ಚರಿಸಿದ್ದಾರೆ.
ನಾಪತ್ತೆಯಾದ ಮೀನುಗಾರ ಚಂದ್ರಶೇಖರ ಅವರ ಸಹೋದರ ನಿತ್ಯಾನಂದ ಗುರುವಾರ ಉಡುಪಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು. ಅಧುನಿಕ ಯುಗದಲ್ಲಿ 7 ಮಂದಿ ಮೀನುಗಾರರು ಮತ್ತು ಬೋಟನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ, ಸರಕಾರ ಕೇವಲ ಓಟ್‌ಬ್ಯಾಂಕಿಗಾಗಿ ಎಲ್ಲ ವ್ಯವಸ್ಥೆ ಇದೆ ಎಂದು ಸುಳ್ಳು ಹೇಳುತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕ್ರಮಕೈಗೊಂಡ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಉ.ಕ. ಜಿಲ್ಲೆಯ ಮೀನುಗಾರರ ಕುಟುಂಬ ಒತ್ತಾಯಿಸಿದೆ.