Advertisement
ಏ. 25ರಿಂದ ಕೈಗೊಳ್ಳಲಾಗಿದ್ದ ಈ ಕಾರ್ಯಾಚರಣೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸರ್ಕಾರದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ 60,000 ಧ್ವನಿವರ್ದಕಗಳಿಂದ ಹೊರಹೊಮ್ಮುವ ಶಬ್ದವನ್ನು ಪರೀಕ್ಷಿಸಿ, ಅವುಗಳ ಅಬ್ಬರದ ಮಿತಿಯನ್ನು ತಜ್ಞರು ವಿಧಿಸಿರುವ ಮಿತಿಗೆ ತಗ್ಗಿಸಲಾಗಿದೆ ಎಂದು ಪ್ರಶಾಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ಧಾರ್ಮಿಕ ಸಂಸ್ಥೆಗೆ ತಾರತಮ್ಯ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪರಸ್ಪರ 50 ಮೀಟರ್‌ನಷ್ಟು ಅಂತರದಲ್ಲಿರುವ ಒಂದು ದೇವಸ್ಥಾನ ಹಾಗೂ ಒಂದು ಮಸೀದಿ, ಪರಸ್ಪರರ ಪ್ರಾರ್ಥನೆಗಳಿಗೆ ಗೌರವ ಕೊಡುವ ಮೂಲಕ ಭಾತೃಪ್ರೇಮ ಮೆರೆದು ಮಾದರಿಯೆನಿಸಿವೆ. ಇಲ್ಲಿ, ಪ್ರತಿದಿನ ಮಸೀದಿಯಲ್ಲಿ ಆಜಾನ್ ಶುರುವಾದಾಗ, ದೇಗುಲದ ಧ್ವನಿವರ್ದಕಗಳನ್ನು ನಿಲ್ಲಿಸಲಾಗುತ್ತದೆ. ಹಾಗೆಯೇ, ದೇಗುಲದ ಧ್ವನಿವರ್ದಕಗಳಲ್ಲಿ ಪ್ರಾರ್ಥನೆಗಳು ಮೊಳಗುತ್ತಿದ್ದಾಗ ಮಸೀದಿಯ ಧ್ವನಿವರ್ದಕಗಳನ್ನು ಬಂದ್ ಮಾಡಲಾಗುತ್ತದೆ.