Advertisement

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 53,476 ಕೋವಿಡ್ ಪ್ರಕರಣ ಪತ್ತೆ, 5 ತಿಂಗಳಲ್ಲಿ ಗರಿಷ್ಠ

10:49 AM Mar 25, 2021 | Team Udayavani |

ನವದೆಹಲಿ:ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಗುರುವಾರ(ಮಾರ್ಚ್ 25) ಬೆಳಗ್ಗೆ 8ಗಂಟೆಗೆ ಕೊನೆಗೊಂಡ 24ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 53,476 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ ಐದು ತಿಂಗಳ ಗರಿಷ್ಠ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,17,87,534ಕ್ಕೆ ಏರಿಕೆಯಾಗಿದ್ದು, ಸೋಂಕು ಹೆಚ್ಚಳ ಕಳವಳಕಾರಿ ಪರಿಸ್ಥಿತಿಗೆ ದೂಡಿರುವುದಾಗಿ ವರದಿ ಹೇಳಿದೆ. ನಿನ್ನೆ(ಮಾ.24)ಗಿಂತ ಇಂದು ಇನ್ನಷ್ಟು ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿದೆ.

ಭಾರತದಲ್ಲಿ ಡಬಲ್ ರೂಪಾಂತರಿ ವೈರಸ್ ಸುಮಾರು 18 ರಾಜ್ಯಗಳಲ್ಲಿ ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿತ್ತು. ಇದು ಎರಡು ವೈರಸ್ ಗಳ ಸಂಗಮವಾಗಿದೆ. ಇತರ ಮಾದರಿಗಿಂತ ಈ ವೈರಸ್ ಕ್ಷಿಪ್ರವಾಗಿ ಹರಡುತ್ತಿದ್ದು, ಇವುಗಳ ಮೇಲೆ ಕೋವಿಡ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರಬಹುದು. ಅಲ್ಲದೇ ಡಬಲ್ ರೂಪಾಂತರಿ ವೈರಸ್ ಲಸಿಕೆ ಪಡೆದವರಲ್ಲೂ ಕಾಣಿಸಿಕೊಳ್ಳಬಹುದು ಎಂದು ವರದಿ ವಿವರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ, ಮಹಾರಾಷ್ಟ್ರ, ಪಂಜಾಬ್, ಕೇರಳ, ಕರ್ನಾಟಕ ಮತ್ತು ಚತ್ತೀಸ್ ಗಢದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದಾಗಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕಳೆದ 24ಗಂಟೆಗಳಲ್ಲಿ 31,855 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು 25,64,881ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next