ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ” ಸ್ವಚ್ಛ ಭಾರತ್ ಮಿಷನ್’ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ 53 ಸಾವಿರ ರೂ. ಆದಾಯ ಒದಗಿಸಿದೆ ಎಂದು ಅಂತಾರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ.
ಸ್ವಚ್ಛ ಭಾರತ್‌ಗೆ ಖರ್ಚಾದ ಒಟ್ಟು ಹಣ ಮತ್ತು ಅದರಿಂದ ಆದ ಉಳಿತಾಯ ಕುರಿತು ಜಾಗತಿಕ ಮಾಹಿತಿ ವಿಶ್ಲೇಷಕ ಸಂಸ್ಥೆ ಎಸ್ಲೇವಿಯರ್ ನಡೆಸಿದ್ದ ಸಮೀಕ್ಷೆ “ಸೈನ್ಸ್ ಡೆರೆಕ್ಟ್’ ಪ್ರಕಟಿಸಿದೆ.
ಗ್ರಾಮ ನೈರ್ಮಲ್ಯದಿಂದಾಗಿ ನಿಯಂತ್ರಣಕ್ಕೆ ಬಂದಿರುವ ಅತಿಸಾರ (ಪ್ರತಿವರ್ಷಕ್ಕೆ 9 ಸಾವಿರ ರೂ.) ಮತ್ತು ನೈರ್ಮಲ್ಯ ಪ್ರವೇಶ ಕಾಲ ಉಳಿತಾಯವನ್ನು (ಪ್ರತಿ ವರ್ಷಕ್ಕೆ 4 ಸಾವಿರ ರೂ.) ಈ ಲಾಭದ ಲೆಕ್ಕಾಚಾರಕ್ಕೆ ಸೇರಿಸಲಾಗಿದೆ.
ಇದನ್ನೂ ಓದಿ:ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು
ಆರ್ಥಿಕವಾಗಿ 2.6 ಪಟ್ಟು ಮತ್ತು ಸಾಮಾಜಿಕವಾಗಿ 5.7 ಪಟ್ಟು ಹಣ ವಾಪಸಾಗಿದೆ ಎಂದು ಸರ್ವೆ ಮಾಹಿತಿ ನೀಡಿದೆ. 2017ರ ಜುಲೈ 20ರಿಂದ ಆಗಸ್ಟ್ 11ರವರೆಗೆ ನಡೆದ ಸಮೀಕ್ಷೆಗೆ 10,051 ಗ್ರಾಮೀಣ ಮನೆಗಳನ್ನು ಆಧರಿಸಿತ್ತು. ಬಿಹಾರ್, ಉತ್ತರ ಪ್ರದೇಶ, ಝಾರ್ಖಂಡ್, ಆಂಧ್ರಪ್ರದೇಶ ಮತ್ತು ಅಸ್ಸಾಂ ನಲ್ಲಿ ಈ ಸರ್ವೇ ಮಾಡಲಾಗಿತ್ತು.
2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಮಿಶನ್ ಆರಂಭಿಸಿದ್ದರು. ಈ ಯೋಜನೆಯಡಿಯಲ್ಲಿ ಹತ್ತು ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ.