Advertisement

Papua New Guinea: ಬುಡಕಟ್ಟು ಜನಾಂಗದ ನಡುವಿನ ಘರ್ಷಣೆಯಲ್ಲಿ 53 ಮಂದಿ ಹತ್ಯೆ…

10:20 AM Feb 19, 2024 | Team Udayavani |

ಜಯಪುರ: ಪಪುವಾ ನ್ಯೂಗಿನಿಯಾದ ಉತ್ತರದಲ್ಲಿರುವ ಎರಡು ಬುಡಕಟ್ಟು ಜನಾಂಗದ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 53 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ಸೋಮವಾರ ತಿಳಿಸಿದೆ.

Advertisement

ಆಸ್ಟ್ರೇಲಿಯನ್ ಸ್ಟೇಟ್ ಬ್ರಾಡ್‌ಕಾಸ್ಟರ್ ಪ್ರಕಾರ, ಎಂಗಾ ಪ್ರಾಂತ್ಯದಲ್ಲಿ ನಡೆದ ಹೊಂಚುದಾಳಿಯಲ್ಲಿ ಸುಮಾರು ಐವತ್ತನಾಲ್ಕು ಮಂದಿಯ ರಕ್ತಸಿಕ್ತ ದೇಹಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಘಟನೆ ಭಾನುವಾರ ಮುಂಜಾನೆ ನಡೆದಿದ್ದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ ವೇಳೆ ದೇಹಗಳು ಪತ್ತೆಯಾಗಿರುವುದಾಗಿ ಪೊಲೀಸ್ ಆಯುಕ್ತ ಸ್ಯಾಮ್ಸನ್ ಕುವಾ ಹೇಳಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ “ಇದು ಎಂಗಾದಲ್ಲಿ ನಾನು ನೋಡಿದ ಅತಿ ದೊಡ್ಡ (ಹತ್ಯೆ) ಘರ್ಷಣೆಯಾಗಿದ್ದು ಅತೀ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರಾಜಧಾನಿ ಪೋರ್ಟ್ ಮೊರೆಸ್ಬಿಯ ವಾಯುವ್ಯಕ್ಕೆ 600 ಕಿಲೋಮೀಟರ್ (370 ಮೈಲುಗಳು) ದೂರದಲ್ಲಿರುವ ವಾಬಾಗ್ ಪಟ್ಟಣದ ಬಳಿ ಈ ಘಟನೆ ಸಂಭವಿಸಿದೆ. ಈ ಘಟನೆಯು ಸಿಕಿನ್, ಅಂಬ್ಯುಲಿನ್ ಮತ್ತು ಕೇಕಿನ್ ಬುಡಕಟ್ಟು ಜನಾಂಗದವರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದೆ ಎಂದು ಭಾವಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಪಪುವಾ ನ್ಯೂಗಿನಿಯಾದಲ್ಲಿ ಶತಮಾನಗಳಿಂದ ಬುಡಕಟ್ಟು ಜನಾಂಗಗಳ ನಡುವೆ ಘರ್ಷಣೆಗಳು ನಡೆಯುತ್ತಿರುತ್ತವೆ ಈ ವೇಳೆ ಅವರ ಬಳಿಯಿರುವ ಆಯುಧಗಳಿಂದ ದಾಳಿಯನ್ನು ಮಾಡುತ್ತಾರೆ ಇದರ ಪರಿಣಾಮ ಹತ್ಯೆಗಳು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.

ಬಂದೂಕುಧಾರಿಗಳು SLR, AK-47, M4, AR15 ಮತ್ತು M16 ರೈಫಲ್‌ಗಳು ಮತ್ತು ಪಂಪ್-ಆಕ್ಷನ್ ಶಾಟ್‌ಗನ್‌ಗಳು ಮತ್ತು ಸ್ವದೇಶಿ ನಿರ್ಮಿತ ಬಂದೂಕುಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎಂದು ಕುವಾ ಹೇಳಿದರು.

ಪಪುವಾ ನ್ಯೂಗಿನಿಯಾದ ಎತ್ತರದ ಪ್ರದೇಶವಾಗಿದ್ದು ಇಲ್ಲಿ ನಿರಂತರವಾಗಿ ಬುಡಕಟ್ಟು ಜನಾಂಗದವರ ಮಧ್ಯೆ ಹಿಂಸಾಚಾರಗಳು ನಡೆಯುತ್ತಿರುತ್ತವೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಸಾಮೂಹಿಕ ಹತ್ಯೆಗಳು ಕೂಡ ನಡೆದಿವೆ ಎಂದು ಹೇಳಲಾಗಿದೆ.

ಹಿಂಸಾಚಾರವನ್ನು ನಿಯಂತ್ರಿಸಲು ಪಪುವಾ ನ್ಯೂಗಿನಿ ಸರ್ಕಾರವು ಹಲವಾರು ಕಾರ್ಯ ತಂತ್ರಗಳನ್ನು ಅನುಸರಿಸಿದ್ದು ಇದರಿಂದ ಹೆಚ್ಚಿನ ಘರ್ಷಣೆಗಳು ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಸೇನೆಯು ಸುಮಾರು 100 ಭದ್ರತಾ ಪಡೆಗಳನ್ನು ಈ ಪ್ರದೇಶಕ್ಕೆ ನಿಯೋಜಿಸಿದ್ದು ಆದರೂ ಇಲ್ಲಿನ ಬುಡಕಟ್ಟು ಜನಾಂಗದ ಸಂಖ್ಯೆಯ ಎದುರು ಭದ್ರತಾ ಸಿಬ್ಬಂದಿ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.

ದಾಳಿಗೆ ಪ್ರತಿಯಾಗಿ ಬುಡಕಟ್ಟು ಜನಾಂಗಗಳು ಪ್ರತಿ ದಾಳಿ ನಡೆಸುತ್ತಿರುತ್ತವೆ ಇದು ದೊಡ್ಡ ಮಟ್ಟಿನ ಘರ್ಷಣೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Viral Video: ಪೊಲೀಸ್ ವಾಹನ ಬಳಸಿ ರೀಲ್ಸ್; ವಿಡಿಯೋ ವೈರಲ್‌ ಬಳಿಕ ಯುವಕನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next