Advertisement
ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಫಸ್ಟ್ ವಿಧಾನವನ್ನು ಭಾರತೀಯ MSME ವಲಯವು ಹೇಗೆ ಅಳವಡಿಸಿಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಮೀಕ್ಷೆಯ ಗುರಿಯಾಗಿದೆ.
Related Articles
Advertisement
ಗ್ರಾಹಕರ ನಡವಳಿಕೆಯಲ್ಲಿ ಲಾಕ್‌ಡೌನ್‌ಗಳಿಂದ ಪ್ರೇರಿತವಾದ ಬದಲಾವಣೆ ಕಂಡುಬಂದಿದೆ. ವರ್ಚುವಲ್ ಸ್ಟೋರ್‌ಗಳಿಂದ ಖರೀದಿಸಲು ಇದು ದಾರಿ ಮಾಡಿಕೊಟ್ಟಿದೆ. MSME ಗಳು ಗ್ರಾಹಕರಿಂದ ಆನ್‌ಲೈನ್ ಖರೀದಿಯಲ್ಲಿ 65% ಹೆಚ್ಚಳವನ್ನು ಧನಾತ್ಮಕವಾಗಿ ಕಂಡಿವೆ. ತಮ್ಮ ಗ್ರಾಹಕರಲ್ಲಿ 80% ರಷ್ಟು ಜನರು ವಿವಿಧ ಪಾವತಿ ಆಯ್ಕೆಗಳನ್ನು ಬಳಸಲು ಮುಂದಾಗುತ್ತಿರುವುದನ್ನು ಗುರುತಿಸಿವೆ. ಡಿಜಿಟಲ್ ವಿಧಾನಗಳ ಸುಲಭತೆ, ಪ್ರವೇಶ ಮತ್ತು ಅಳವಡಿಕೆಯ ಅಂಶಗಳಿಂದಾಗಿ ಹಾಲಿ ಗ್ರಾಹಕರು ಇನ್ನಷ್ಟು ಖರ್ಚು ಮಾಡುತ್ತಿರುವುದಕ್ಕೆ 51% ಹಾಗೂ ಪುನರಾವರ್ತಿತ ಖರೀದಿಗಳಲ್ಲಿ ಹೆಚ್ಚಳ ಆಗುತ್ತಿರುವುದಕ್ಕೆ 46% MSMEಗಳು ಸಾಕ್ಷಿಯಾಗಿವೆ.
MSMEಗಳು ಡಿಜಿಟಲ್ ಅವಕಾಶವನ್ನು ಬಳಸಿಕೊಂಡು ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಹೆಚ್ಚಿಸುವ ಮೂಲಕ ಕೋವಿಡ್-19ರ ನಷ್ಟವನ್ನು ತುಂಬಿಕೊಳ್ಳಲು ಉತ್ತಮ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ತೋರಿಸಿವೆ. ಪ್ರಸ್ತುತ, 66% MSMEಗಳು ಸಾಮಾಜಿಕ ಮಾಧ್ಯಮವನ್ನು ಆನ್‌ಲೈನ್ ಮಾರಾಟದ ಚಾನಲ್‌ನಂತೆ ಬಳಸುತ್ತಿವೆ. ಮಾರುಕಟ್ಟೆ (62%), ಕಂಪನಿಯ ಮಾಲೀಕತ್ವದ ಪ್ಲಾಟ್‌ಫಾರ್ಮ್‌ಗಳು ಅಂದರೆ ಅಪ್ಲಿಕೇಶನ್ (61%), ಸ್ವಂತ ಇ-ಕಾಮರ್ಸ್ ವೆಬ್‌ಸೈಟ್ (54%) ಮತ್ತು ಥರ್ಡ್ ಪಾರ್ಟಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು (54%) ಆನಂತರದ ಸ್ಥಾನಗಳಲ್ಲಿವೆ.ಸೋಷಿಯಲ್ ಮೀಡಿಯಾಗಳು ಸ್ಪರ್ಧೆಯನ್ನು ಪ್ರೇರೇಪಿಸಿ ವ್ಯವಹಾರಗಳ ಬೆಳವಣಿಗೆಗೆ ಕಾರಣವಾಗುತ್ತಿದೆ. ಡಿಜಿಟಲ್ ಸ್ವರೂಪವು ಭಾರತೀಯ ಸಣ್ಣ ವ್ಯವಹಾರಗಳ ಬೆಳವಣಿಗೆಗೆ ಪ್ರಮುಖ ಚಾಲಕಶಕ್ತಿಯಾಗಿದೆ. ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಂತೆ, ಸಾಮಾಜಿಕ ಜಾಲ ತಾಣಗಳು ಅತ್ಯಂತ ಜನಪ್ರಿಯ ಆನ್‌ಲೈನ್ ಮಾರಾಟ ಚಾನಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡುತ್ತಿರುವವರಲ್ಲಿ 26% ಸಂಸ್ಥೆಗಳು ಸಾಂಕ್ರಾಮಿಕ ಸಮಯದಲ್ಲಿ ಅದನ್ನು ಪ್ರಾರಂಭಿಸಿದವು. ಸಮೀಕ್ಷೆ ಮಾಡಿದ ಪೈಕಿ 56% MSME ಗಳು ಕಳೆದ 12-ತಿಂಗಳ ಬೆಳವಣಿಗೆಗೆ ಇದೇ ಪ್ರಮುಖ ಕಾರಣ ಎಂದಿವೆ. ಬಳಕೆದಾರ ಸ್ನೇಹಿ ಇಂಟರ್‌ಫೇಸ್ (67%) ಮತ್ತು ಮಾರಾಟವಲ್ಲದ ಉದ್ದೇಶದಿಂದ ಮಾರಾಟಕ್ಕೆ ನೈಸರ್ಗಿಕ ಪರಿವರ್ತನೆಯು (67%) ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮಾರಾಟಕ್ಕೆ ಬಳಸಿಕೊಳ್ಳಲು ಪ್ರಮುಖ ಕಾರಣಗಳಾಗಿವೆ, ಇದನ್ನು ಅಳವಡಿಸಿಕೊಳ್ಳಲು ಗಮನಾರ್ಹ ಕಾರಣವೆಂದರೆ ಸ್ಪರ್ಧೆ. ವ್ಯಾಪಾರವು ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಪ್ರತಿಸ್ಪರ್ಧಿಗಳನ್ನು ನೋಡಿ ತಾವೂ ಸಾಮಾಜಿಕ ಮಾಧ್ಯಮವನ್ನು ಸ್ವೀಕರಿಸಿರುವುದಾಗಿ 65% ಭಾರತೀಯ MSME ಗಳು ಹೇಳಿಕೊಂಡಿವೆ. ಜಾಗತಿಕವಾಗಿ ಮಾರಾಟ ಮಾಡುವ 86% MSMEಗಳು ಕೋವಿಡ್-19 ಸಮಯದಲ್ಲಿ ಗಡಿಯಾಚೆಗಿನ ವ್ಯಾಪಾರದಲ್ಲಿ ಬೆಳವಣಿಗೆಯನ್ನು ದಾಖಲಿಸಿದ್ದಾಗಿ ಹೇಳಿಕೊಂಡಿವೆ. ಹೆಚ್ಚಿನ ವೆಚ್ಚಗಳು (74%), ವಿನಿಮಯ ಸಂಬಂಧಿತ ಸಮಸ್ಯೆಗಳು (31%), ಮತ್ತು ವಂಚನೆ-ಸಂಬಂಧಿತ ಕಾಳಜಿಗಳು (30%) ಗಡಿಯಾಚೆ ವ್ಯಾಪಾರ ಮಾಡಲು ಇರುವ ಕೆಲವು ಸವಾಲುಗಳೆಂದು MSMEಗಳು ಗುರುತಿಸಿವೆ. ಅಂತಹ ಸಮಸ್ಯೆಗಳನ್ನು ನಿವಾರಿಸಲು, MSMEಗಳು ಥರ್ಡ್ ಪಾರ್ಟಿ ಆನ್‌ಲೈನ್ ಮಾರಾಟ ವೇದಿಕೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ, ಸ್ವಂತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ, ಆನ್‌ಲೈನ್ ಮಾರಾಟಕ್ಕಾಗಿ ಆಂತರಿಕವಾಗಿ ಡಿಜಿಟಲೀಕರಣಗೊಳ್ಳುತ್ತವೆ ಮತ್ತು ಜಾಗತಿಕ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ.
ಸೇವೆಗಳನ್ನು ಅತ್ಯುತ್ತಮಗೊಳಿಸುವ ಮೂಲಕ PayPal (70%) ನಂತಹ ಡಿಜಿಟಲ್ ವ್ಯಾಲೆಟ್‌ಗಳನ್ನು ಸ್ವೀಕರಿಸಲು ಸಾಧ್ಯವಾಗಿದೆ.