Advertisement

ಒಂದೇ ತಿಂಗಳಲ್ಲಿ  51,000 ಜನ ವಿಮಾನಯಾನ 

10:32 AM Dec 30, 2018 | |

ಹುಬ್ಬಳ್ಳಿ: ನಗರದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ವೃದ್ಧಿಯಾಗುತ್ತಿದ್ದು, ಇದೀಗ ತಿಂಗಳಿಗೆ ವಿಮಾನಯಾನ ಕೈಗೊಳ್ಳುವ ಪ್ರವಾಸಿಗರ ಸಂಖ್ಯೆ 50 ಸಾವಿರ ದಾಟಿದೆ. ನವೆಂಬರ್‌ ತಿಂಗಳವೊಂದರಲ್ಲೇ ಹುಬ್ಬಳ್ಳಿಯಿಂದ ಅಹ್ಮದಾಬಾದ್‌, ಬೆಂಗಳೂರು, ಚೆನೈ, ಗೋವಾ, ಹೈದರಾಬಾದ್‌, ಜಬಲಪುರ, ಕೊಚ್ಚಿ, ಮಂಗಳೂರು, ಮುಂಬಯಿಗೆ ಪ್ರಯಾಣಿಸಿದವರ ಸಂಖ್ಯೆ 51,699ರಷ್ಟಾಗಿದೆ. ಜುಲೈ ತಿಂಗಳಲ್ಲಿ ವಿಮಾನಯಾನಿಗಳ ಸಂಖ್ಯೆ 45,548ರಷ್ಟಿತ್ತು.

Advertisement

ನವೆಂಬರ್‌ ತಿಂಗಳಲ್ಲಿ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ 4,114 ಜನರು ವಿಮಾನಯಾನ ಮಾಡಿದರೆ, ಅಹ್ಮದಾಬಾದ್‌ನಿಂದ ಹುಬ್ಬಳ್ಳಿಗೆ 4,369 ಪ್ರಯಾಣಿಕರು ಆಗಮಿಸಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ 10,102, ಬೆಂಗಳೂರಿನಿಂದ ಹುಬ್ಬಳ್ಳಿಗೆ 9,924, ಹುಬ್ಬಳ್ಳಿಯಿಂದ ಚೆನೈಗೆ 3,619, ಚೆನೈ ನಿಂದ ಹುಬ್ಬಳ್ಳಿಗೆ 3,638, ಹುಬ್ಬಳ್ಳಿಯಿಂದ ಗೋವಾಕ್ಕೆ 18,894, ಗೋವಾದಿಂದ ಹುಬ್ಬಳ್ಳಿಗೆ 1,397, ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 2,059, ಹೈದರಾಬಾದ್‌ನಿಂದ ಹುಬ್ಬಳ್ಳಿಗೆ 1,997, ಹುಬ್ಬಳ್ಳಿಯಿಂದ ಜಬಲಪುರಕ್ಕೆ 14, ಜಬಲಪುರದಿಂದ ಹುಬ್ಬಳ್ಳಿಗೆ 14, ಹುಬ್ಬಳ್ಳಿಯಿಂದ ಕೊಚ್ಚಿಗೆ 1,444, ಕೊಚ್ಚಿಯಿಂದ ಹುಬ್ಬಳ್ಳಿಗೆ 1,451, ಹುಬ್ಬಳ್ಳಿಯಿಂದ ಮಂಗಳೂರಿಗೆ 120, ಮಂಗಳೂರಿನಿಂದ ಹುಬ್ಬಳ್ಳಿಗೆ 80 ಹಾಗೂ ಹುಬ್ಬಳ್ಳಿಯಿಂದ ಮುಂಬಯಿಗೆ 2,703, ಮುಂಬಯಿಯಿಂದ ಹುಬ್ಬಳ್ಳಿಗೆ 2,765 ಪ್ರಯಾಣಿಕರು ವಿಮಾನಯಾನ ಮಾಡಿದ್ದಾರೆ.

ನವೆಂಬರ್‌ನಲ್ಲಿ ವಿಮಾನಯಾನ ಮೂಲಕ ಹುಬ್ಬಳ್ಳಿಯಿಂದ ವಿವಿಧ ಪ್ರದೇಶಗಳಿಗೆ ತೆರಳುವ ವಿಮಾನ ಪ್ರಯಾಣಿಕರ ಸಂಖ್ಯೆಯು 26,064 ಆಗಿದ್ದರೆ, ವಿವಿಧ ಸ್ಥಳಗಳಿಂದ ಹುಬ್ಬಳ್ಳಿಗೆ ಆಗಮಿಸುವವರ ಸಂಖ್ಯೆಯು 25,635 ಆಗಿದೆ. ಜೊತೆಗೆ ಹುಬ್ಬಳ್ಳಿಯಿಂದ ವಿವಿಧ ಪ್ರದೇಶಗಳಿಗೆ ಸರಕು, ಕೊರಿಯರ್‌ ಸಾಗಾಟವು 10.3 ಟನ್‌ ಆಗಿದ್ದರೆ, ಇನ್ನಿತರೆ ಪ್ರದೇಶಗಳಿಂದ ಹುಬ್ಬಳ್ಳಿಗೆ 15.7 ಟನ್‌ ಬಂದಿದೆ. ಒಟ್ಟಾರೆ 25.9 ಟನ್‌ದಷ್ಟು ಸರಕು, ಕೊರಿಯರ್‌ ಸಾಗಾಟವಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next