Advertisement

ಮುರುಘರಾಜೇಂದ್ರ ಶ್ರೀ ಗಳ 50ನೇ ಹುಟ್ಟುಹಬ್ಬ :ಬೈನಾ ಕನ್ನಡ ವಿದ್ಯಾರ್ಥಿಗಳಿಗೆ ನೆರವು

08:07 PM Jun 27, 2022 | Team Udayavani |

ಪಣಜಿ:  ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ ಗೋವಾ ರಾಜ್ಯದ ಕನ್ನಡ ಮಾಧ್ಯಮ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪತ್ರಿ ವರ್ಷ ಕರವೇ ವತಿಯಿಂದ ಪುರಸ್ಕರಿಸಿ ಗೌರವಿಸಲಾಗುವದು ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.

Advertisement

ಸೋಮವಾರ ಗೋಕಾಕದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಹುಟ್ಟು ಹಬ್ಬದ ಅಂಗವಾಗಿ ಕರವೇ ವತಿಯಿಂದ ಗೋವಾ ರಾಜ್ಯದ ವಾಸ್ಕೊ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಮತ್ತು ಝರಿ ಜುವಾರಿ ನಗರ ಬೈನಾ ಸಾಸ್ಮೋಲಿಂನ
ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಕನ್ನಡ ಶಾಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕರವೇ ನಿರಂತರ ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಶಾಲಾ ದಾಖಲಾತಿಯನ್ನು ಹೆಚ್ಚಿಸಲು ಕರವೇ ವತಿಯಿಂದ ಗೋವಾ ರಾಜ್ಯದಲ್ಲಿ ದಾಖಲಾತಿ ಅಭಿಯಾನ ಹಮ್ಮಿಕೊಂಡು, ಕನ್ನಡಿಗರನ್ನು ಭೇಟಿಯಾಗಿ ತಮ್ಮ ಮಕ್ಕಳಿಗೆ ಕನ್ನಡವನ್ನು ಉಳಿಸಿ ಬೆಳೆಸಲು ಸಹಕರಿಸುವಂತೆ ವಿನಂತಿಸಲಾಗುವದು ಎಂದರು.

ಇದೇ ಸಂದರ್ಭದಲ್ಲಿ 250 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೋಟಬುಕ್ , ಪೆನಗಳನ್ನು ವಿತರಿಸಿ ಸಿಹಿಯನ್ನು ಹಂಚಿ ಶ್ರೀಗಳ ಹುಟ್ಟುಹಬ್ಬದವನ್ನು ಸರಳವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಶಾಲೆಯ ಪ್ರಾಚಾರ್ಯ ಪಿ.ವಿ. ಪಾಟೀಲ್ ವಹಿಸಿದ್ದರು.

ಈ ಸಂದರ್ಭದಲ್ಲಿ ಜುವಾರಿ ನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಶಿಕ್ಷಕರುಗಳಾದ ಸುಧೀರ್ ಬೆಂಡೆ, ಯಲಾಲಿಂಗೇಶ ತಾಳಿಕೋಟಿ, ಅರೆಬೆನ್ನಚಿ, ಉದಯ ಮುಖಂಡರಾದ ಸಾದಿಕ ಹಲ್ಯಾಳ, ದೀಪಕ ಹಂಜಿ, ಮುಗುಟ ಪೈಲವಾನ , ಮಹಾದೇವ ಮಕ್ಕಳಗೇರಿ, ಭರಮಣ್ಣ ಕಟ್ಟಿಮನಿ, ರಾಮ ಕುಡ್ಡೆಮಿ, ಇಸಾಕ ಶಿರೂರು, ರಮಜಾನ ಅಂಡಗಿ, ಸುಲ್ತಾನ್ ನಧಾಪ, ಕಾಂತು ದಳವಾಯಿ ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next