Advertisement

 ನಗರದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಷಾಚರಣೆ

03:17 PM Oct 25, 2017 | |

ನಗರ: ಅಮೋಘ ಸೇವಾ ಕೈಂಕರ್ಯಗಳೊಂದಿಗೆ ಸಾಮಾಜಿಕ ಸ್ವಾಸ್ಥವನ್ನು ಕಾಪಾಡಲು ಶಿಕ್ಷಣವು ಅಗತ್ಯಎಂಬುದನ್ನು ಅರಿತುಕೊಂಡ ಡಾ| ಹೆಗ್ಗಡೆ ಯವರು ಎಲ್ಲರಿಗೂ ಪ್ರಾತಃ ಸ್ಮರಣೀಯರು ಎಂದು ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಪಿ. ವಿ.ಗೋಕುಲ್‌ನಾಥ್‌ ಹೇಳಿದರು.

Advertisement

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಷಾಚರಣೆಯ ಸಲುವಾಗಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೂರಾರು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ನೀಡುವ ಮೂಲಕ ಇಡೀ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನೇತೃತ್ವ ವಹಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರಗತಿ ಸ್ಟಡಿ ಸೆಂಟರ್‌ನ ಪರವಾಗಿ ಶುಭ ಹಾರೈಸಿದರು.

ಪ್ರಗತಿ ಸಂಸ್ಥೆಯನ್ನು ಧರ್ಮಸ್ಥಳ ಬಿಲ್ಡಿಂಗ್‌ಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಹಾಗೂ ಇಂದಿನವರೆಗೂ ಅವರ ಅನುಗ್ರಹ,
ಮಾರ್ಗದರ್ಶನ ಹಾಗೂ ಸಹಕಾರಗಳಿಗಾಗಿ ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಾಗ್ಯಗಳು ಲಭಿಸುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭ ಪ್ರಾಂಶುಪಾಲೆ ಕೆ. ಹೇಮಲತಾ ಗೋಕುಲ್‌ನಾಥ್‌ ಉಪಸ್ಥಿತರಿದ್ದರು. ಸಮಾಜಶಾಸ್ತ್ರ ಉಪನ್ಯಾಸಕಿ ರೇಣುಕಾ, ಆಂಗ್ಲಭಾಷಾ ಉಪನ್ಯಾಸಕಿ, ತನುಜಾ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಪ್ರತಿಭಾ ವಂದಿಸಿದರು. ಗೀತಾ ಕೊಂಕೊಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರು, ಸಿಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

Advertisement

ಪರಿಸರ ಸ್ವಚ್ಛತೆ
ಪಟ್ಟಾಭಿಷೇಕದ ಅಂಗವಾಗಿ ಧರ್ಮಸ್ಥಳ ಬಿಲ್ಡಿಂಗ್‌, ಪರಿಸರದಲ್ಲಿ ಪ್ರಗತಿ ಸ್ಟಡಿ ಸೆಂಟರ್‌ ನ ಸಂಚಾಲಕ ಪಿ. ವಿ. ಗೋಕುಲ್‌ನಾಥ್‌ ಅವರ ನೇತೃತ್ವದಲ್ಲಿ, ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕಣ್ಣಿಗೆ ಕಾಣುವ ದೇವರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯ ಸಹಾಯಕ ಅಧಿಕಾರಿ ಶುಭಾ ಉದಯ ರೈ ಮಾತನಾಡಿ, ಕಣ್ಣಿಗೆ ಕಾಣುವ ದೇವರೆಂದೇ ಕರೆಸಿಕೊಳ್ಳುತ್ತಿರುವ ಖಾವಂದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾವಿರಾರು ಬಡ ಕುಟುಂಬಗಳ ಮನೆಯ ಬೆಳಕಾದವರು. ಅವರು ನಮಗೆಲ್ಲ ಪ್ರೇರಣೆ, ಚೈತನ್ಯ ನೀಡುವಂತಾಗಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next