Advertisement

ಸೌದಿ ದೊರೆಗೆ 506 ಟನ್‌ ಲಗ್ಗೇಜ್‌

03:50 AM Mar 01, 2017 | Team Udayavani |

ಜಕಾರ್ತಾ: ಅಬ್ಟಾ, ದೊರೆಯೇ! ಸೌದಿ ಅರೇಬಿಯಾ ರಾಜ ಅಬ್ದುಲ್‌ ಅಜೀಜ್‌ ಅಲ್‌- ಸೌದ್‌ “ಲಕ್ಷುರಿ ದೊರೆ’ ಎಂಬ ವಿಚಾರ ಎಲ್ಲರಿಗೂ ಗೊತ್ತೇ ಇದೆ. 46 ವರ್ಷದ ನಂತರ ಇದೇ ಮೊದಲ ಬಾರಿಗೆ ಸೌದಿ ದೊರೆ ಇಂಡೋನೇಷ್ಯಾಕ್ಕೆ ಕಾಲಿಡುತ್ತಿದ್ದರೂ,  ಈ ಅಪರೂಪದ ಪ್ರವಾಸ ಚರ್ಚೆಗೆ ಬರುತ್ತಲೇ ಇಲ್ಲ. ರಾಜಾ ಅಬ್ದುಲ್‌ ಅವರ ಲಕ್ಷುರಿತನವೇ ಪುನಃ ಜಗತ್ತಿನ ಕಣಿ¤ರುಗಿಸಿದೆ. ಸೌದಿ ದೊರೆ ಈ ವೇಳೆ ತಮ್ಮೊಂದಿಗೆ 506 ಟನ್‌ ಲಗ್ಗೇಜ್‌ ಕೊಂಡೊಯ್ಯಲಿದ್ದಾರೆ!

Advertisement

ವಿಶ್ವದ ಎರಡು ದೊಡ್ಡ ಮುಸ್ಲಿಮ್‌ ರಾಷ್ಟ್ರಗಳ ಭೇಟಿ ಇದಾಗಿದ್ದು, ಮಹತ್ವದ ಆರ್ಥಿಕ ಒಪ್ಪಂದಗಳು ಏರ್ಪಡಲಿವೆ. ಆದರೆ, ಈ 9 ದಿನಗಳ ಪ್ರವಾಸಕ್ಕೆ ದೊರೆ ಅಬ್ದುಲ್‌ ಮಾಡಿಕೊಂಡ ತಯಾರಿ ಕಣ್ಣು ಕುಕ್ಕುತ್ತದೆ. 2 ಮರ್ಸಿಡಿಸ್‌ ಬೆನ್‌l- ಎಸ್‌ 600 ಹಾಗೂ 2 ಎಲೆಕ್ಟ್ರಿಕ್‌ ಎಲಿವೇಟರ್‌ಗಳನ್ನೂ ಅವರು ಸೌದಿಯಿಂದಲೇ ಹೊತ್ತೂಯ್ಯಲಿದ್ದಾರೆ! ಈಗಾಗಲೇ ಇವು ಕಾರ್ಗೋದಲ್ಲಿ ಜಕಾರ್ತದ ಹಾದಿಯಲ್ಲಿವೆ.

ಇಷ್ಟು ಲಕ್ಷುರಿ ಲಗ್ಗೇಜುಗಳನ್ನು ನಿರ್ವಹಿಸುವುದು ಸರ್ಕಾರಕ್ಕೆ ಕಷ್ಟವೆಂದು ಇಂಡೋನೇಷ್ಯಾ ಸರ್ಕಾರ ಪಿಟಿ ಜಸಾ ಅಂಗ್‌ಕಾಸಾ ಸೆಮೆಸ್ತಾ ಎಂಬ ಖಾಸಗಿ ಕಂಪನಿಗೆ ಹೊಣೆ ವಹಿಸಿದೆ. ಕಂಪನಿ ಇದಕ್ಕೆಂದೇ 572 ಸಿಬ್ಬಂದಿಯನ್ನು ನೇಮಿಸಿದೆ! ದೊರೆಯ ಜೊತೆಗೆ ಸೌದಿಯ 10 ಸಚಿವರು, 25 ರಾಜಕುಮಾರರು, 1500 ಭದ್ರತಾ ಸಿಬ್ಬಂದಿ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next