Advertisement
“ಆಪರೇಷನ್ ನನ್ಹೇ ಫರಿಶ್ತೆ’ ಶೀರ್ಷಿಕೆ ಅಡಿ ಈ ಕಾರ್ಯಾಚರಣೆ ನಡೆದಿದ್ದು, ರಕ್ಷಿಸಿದ 505 ಜನರಲ್ಲಿ 438 ಮಕ್ಕಳು ಕರ್ನಾಟಕ ಮೂಲದವರಾಗಿದ್ದು, ಈ ಪೈಕಿ 400ಕ್ಕೂ ಅಧಿಕ ಮಕ್ಕಳನ್ನು ಆಧಾರ್ ಸಹಾಯದಿಂದ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಆರ್‌ಪಿಎಫ್ ಸುರಕ್ಷತಾ ಆಯುಕ್ತೆ ದೇವಶ್ಮಿತಾ ಚಟ್ಟೋಪಾಧ್ಯಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನೈಋತ್ಯ ರೈಲ್ವೆ ಆರ್‌ಪಿಎಫ್ ಇಂತಹ ಒಂದು ವಿಶೇಷ ಕಾರ್ಯಾಚರಣೆ ನಡೆಸಿದೆ. ಹುಬ್ಬಳ್ಳಿ ಮತ್ತು ಮೈಸೂರು ರೈಲ್ವೆ ನಿಲ್ದಾಣಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತ್ಯಧಿಕ ಮಕ್ಕಳು ಮತ್ತು ಮಹಿಳೆಯರನ್ನು ಆರ್‌ಪಿಎಫ್ ರಕ್ಷಿಸಿದೆ.
ಕೇಂದ್ರ ಸರ್ಕಾರ ನೀಡುವ ಮಾಹಿತಿಂತೆ ಪ್ರತಿ 8 ನಿಮಿಷಕ್ಕೊಂದು ಮಗು ಅಪಹರಣಕ್ಕೆ ಒಳಗಾಗುತ್ತದೆ. ಆರ್‌ಪಿಎಫ್ ರಕ್ಷಿಸಿದ 505 ಮಕ್ಕಳು ಮತ್ತು ಮಹಿಳೆಯರಲ್ಲಿ 451 ಗಂಡು ಮತ್ತು 54 ಹೆಣ್ಣು ಮಕ್ಕಳು-ಮಹಿಳೆಯರಿದ್ದಾರೆ. ಪ್ರಮುಖವಾಗಿ ಆರ್‌ಪಿಎಫ್ ಕಳೆದ ನೂರು ದಿನಗಳಲ್ಲಿ 6 ಹೆಣ್ಣುಮಕ್ಕಳ ಅಪಹರಣ ಪ್ರಕರಣವನ್ನು ಭೇದಿಸಿದೆ. 61 ಬಾಲಕಾರ್ಮಿಕ, ಅಂಗಾಗ ಮಾರಾಟ ಪ್ರಕರಣ, 438 ಮನೆ ಬಿಟ್ಟು ಬಂದ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.