Advertisement

501 ಸಾಮೂಹಿಕ ಮದುವೆ ಕಾರ್ಯಕ್ರಮ: ವಿರೂಪಾಕ್ಷ

12:11 PM Nov 02, 2021 | Team Udayavani |

ಸಿಂಧನೂರು: ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವ ನಿಮಿತ್ತ ನಗರದಲ್ಲಿ ತಾಲೂಕು ಕುರುಬರ ಸಂಘದಿಂದ 501 ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

Advertisement

ನಗರದ ತಾಲೂಕು ಕುರುಬರ ಸಂಘದಲ್ಲಿ ಕರೆದಿದ್ದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಇದ್ದ ಹಿನ್ನೆಲೆಯಲ್ಲಿ ಬಡ ಕುಟುಂಬದವರು ಮದುವೆ ಆಯೋಜನೆಗೆ ಸಂಕಷ್ಟ ಎದುರಿಸುವಂತಾಗಿತ್ತು. ಬಹುತೇಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಹೊತ್ತಿನಲ್ಲಿ ಸಮಾಜದವರಿಗೆ ನೆರವಾಗಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಡಿಸೆಂಬರ್‌ 26ರಂದು ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಡಿಸೆಂಬರ್‌ 15ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಬಹುದು. ಷರತ್ತುಗಳನ್ನು ಒಳಗೊಂಡಿದ್ದು, ಹೆಸರು ನೋಂದಾಯಿಸಲು ಮೊ.9945648851, 9448351659, 9449689792, 9448119718, 8884126669, 9916524102 ಸಂಪರ್ಕಿಸಬಹುದು ಎಂದರು.

ನ.22ರಂದು ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಕನಕ ವೃತ್ತದಲ್ಲಿರುವ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಕುಷ್ಟಗಿ ಕನಕದಾಸ ಕಲ್ಯಾಣ ಮಂಟಪದವರೆಗೆ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಕಲ್ಯಾಣ ಮಂಟಪದಲ್ಲಿ ಕುರುಬರ ಸಮಾಜ ಹಾಗೂ ಕನಕ ನೌಕರರ ಸಂಘದಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜಿಲ್ಲೆಯ ಪ್ರತಿ ತಾಲೂಕಿನಿಂದ ಎಸ್ಸೆಸ್ಸೆಲ್ಸಿಯ ಒಬ್ಬ, ಪಿಯುಸಿಯ ಮೂವರು, ಪದವಿಯ ಮೂವರು ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದರು.

ಸಮಾಜದ ಗುರುಗಳಾದ ಮಾದಯ್ಯ ಗುರುವಿನ್‌, ನಂಜುಂಡಯ್ಯ ಗುರುವಿನ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ಪೂಜಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಭೀಮಣ್ಣ ಸಂಗಟಿ, ಕಾರ್ಯಾಧ್ಯಕ್ಷ ವೆಂಕೋಬ ಸಾಸಲಮರಿ, ಪ್ರಧಾನ ಕಾರ್ಯದರ್ಶಿ ಶಂಭಣ್ಣ ಸುಕಾಲಪೇಟೆ, ಕನಕ ಯುವ ಸೇನೆ ಅಧ್ಯಕ್ಷ ನಾಗರಾಜ ಬಾದರ್ಲಿ, ವೆಂಕಟೇಶ ಬಾದರ್ಲಿ, ವೆಂಕಟೇಶ ಎಸ್‌ .ಬಿ, ರೇವಣಸಿದ್ದಪ್ಪ, ಸಿದ್ದೇಶ್ವರ ಗುರಿಕಾರ್‌, ವಿ.ಬಸವರಾಜ್‌ ಸೇರಿದಂತೆ ಇತರರು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next