Advertisement

ಐಎಂಎ ಜ್ಯುವೆಲ್ಸ್‌ನಿಂದ 5,000 ಕೆ.ಜಿ ಚಿನ್ನ ಮಾರಾಟ

11:38 AM Nov 16, 2018 | Team Udayavani |

ಬೆಂಗಳೂರು: ಆಭರಣ ಮಾರಾಟ ವಲಯದ ಐಎಂಎ ಜ್ಯುವೆಲ್ಸ್‌  ಕಂಪೆನಿಯು ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಕ್ಷೇತ್ರಕ್ಕೆ ಬಂದು ಎರಡು ವರ್ಷಗಳು ಪೂರೈಸಿದೆ. ಈ ಕಾಲಾವಧಿಯಲ್ಲಿ 5,000 ಕೆ.ಜಿ. ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ.

Advertisement

ನಗರದ ಲೇಡಿ ಕರ್ಜನ್‌ ರಸ್ತೆ ಮತ್ತು ಜಯನಗರದ ಆಭರಣ ಮಾರಾಟ ಮಳಿಗೆಗಳು ಈ ವಹಿವಾಟಿಗೆ ಗಣನೀಯವಾದ ಕೊಡುಗೆ ನೀಡಿವೆ. ಈ ವಹಿವಾಟಿನ ವೇಳೆ ಸುಮಾರು 50 ಕೋಟಿ ರೂ.ನಷ್ಟು ಸರ್ಕಾರದ ಬೊಕ್ಕಸಕ್ಕೆ ಜಿಎಸ್‌ಟಿ ಹಾಗೂ ವಿವಿಧ ರೂಪದ ತೆರಿಗೆ ಪಾವತಿಸಿದ್ದೇವೆ ಎಂದು ಐಎಂಎ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೊಹಮ್ಮದ್‌ ಮನ್ಸೂರ್‌ ಖಾನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೇಡಿ ಕರ್ಜನ್‌ ರಸ್ತೆಯ ಎರಡು ಅಂತಸ್ತಿನ 12 ಸಾವಿರ ಚ.ಅಡಿ ವಿಸ್ತೀರ್ಣದ ಐಎಂಎ ಜ್ಯುವೆಲರಿ ಬೊಟಿಕ್‌ನಲ್ಲಿ 1200 ಕೆ.ಜಿ.ಗೂ ಅಧಿಕ ಚಿನ್ನದ ಆಭರಣಗಳನ್ನು ಹಾಗೂ ಜಯನಗರದ 18 ಸಾವಿರ ಚ.ಅಡಿ. ಯಲ್ಲಿರುವ ಮೂರು ಅಂತಸ್ತಿನ ಬೃಹತ್‌ ಮಳಿಗೆಯಲ್ಲಿ 1500 ಕೆ.ಜಿ.ಗೂ ಅಧಿಕ ಒಡವೆಗಳನ್ನು ಪ್ರದರ್ಶನ ಮಾರಾಟಕ್ಕಿಡಲಾಗಿದೆ. ನಮ್ಮಲ್ಲಿ ಕುಂದನ್‌, ಮೀನಾಕರಿ, ರಾಜ್‌ಕೋಟ್‌, ಕೊಲ್ಕತಾ ಶೈಲಿಯ ಆಭರಣಗಳು ಮಾರಾಟಕ್ಕಿದ್ದು, ಎಲ್ಲವೂ 916 ಬಿಐಎಸ್‌ ಹಾಲ್‌ಮಾರ್ಕ್‌ ಚಿನ್ನದ ಆಭರಣಗಳಾಗಿವೆ.

ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸ್ಟೋನ್‌ ಮತ್ತು ವೇಸ್ಟೆಜ್‌ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ ವಾದರೂ ಸಾಮಾನ್ಯ ದಿನಗಳಲ್ಲಿ ಆಕರ್ಷಕ ಮೇಕಿಂಗ್‌ ಚಾರ್ಜಸ್‌ ಅನ್ನು ಮಾತ್ರ ಘೋಷಿಸುತ್ತೇವೆ. ಈ ಕೊಡುಗೆ ಕೇವಲ ಬೆಂಗಳೂರಿನ ಶೋರೂಮ್‌ಗಳಲ್ಲಿ ಮಾತ್ರವಲ್ಲ ದೇಶಾದ್ಯಂತ ಎಲ್ಲ ಐಎಂಎ ಮಳಿಗೆಗಳಲ್ಲೂ ಲಭ್ಯ ಎಂದು ಅವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next