ನವದೆಹಲಿ: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ ಭಕ್ತರು ತಮ್ಮ ಕನಸು ನನಸಾದ ಸಂಭ್ರಮದಲ್ಲಿದ್ದಾರೆ ಅದೇ ರೀತಿ ಸೂರತ್ ನ ವಜ್ರ ವ್ಯಾಪಾರಿಯೊಬ್ಬರು ರಾಮ ಮಂದಿರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಮುಂದಾಗಿದ್ದಾರೆ ಅದರಂತೆ ಸುಮಾರು 5000 ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳನ್ನು ಬಳಸಿ ರಾಮ ಮಂದಿರದ ಮಾದರಿಯನ್ನು ಹೋಲುವ ನೆಕ್ಲೇಸ್ ತಯಾರು ಮಾಡಿದ್ದಾರೆ.
ಸೂರತ್ ಮೂಲದ ವಜ್ರದ ವ್ಯಾಪಾರಿ ಇದನ್ನು ತಯಾರು ಮಾಡಿದ್ದು ಅಯೋಧ್ಯೆಯ ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.
40 ನುರಿತ ಕುಶಲಕರ್ಮಿಗಳು ರಾಯಲ್ ಕೋರ್ಟ್ ಜೊತೆಗೆ ಭಗವಾನ್ ರಾಮ, ಹನುಮಾನ್, ಸೀತಾ, ಲಕ್ಷ್ಮಣರ ಶಿಲ್ಪಗಳನ್ನು ಕೆತ್ತಿ ಸುಮಾರು 35 ದಿನಗಳ ಕಾಲ ಶ್ರಮವಹಿಸಿ ಈ ನೆಕ್ಲೇಸ್ ತಯಾರಿಸಲಾಗಿದೆ. ಸದ್ಯ ನೆಕ್ಲೆಸ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜನವರಿ 22 ರಂದು ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಂದೇ ಇದನ್ನು ಮಂದಿರಕ್ಕೆ ಉಡುಗೊರೆಯಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ರಸೇಶ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಡಿಯಾ, ಈ ಹಾರ ತಯಾರಿಸಿಸಲು 5000 ಕ್ಕೂ ಹೆಚ್ಚು ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆ. ಜೊತೆಗೆ 2 ಕೆಜಿ ಬೆಳ್ಳಿಯನ್ನು ಬಳಸಲಾಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. “ರಾಮಾಯಣದ ಪ್ರಮುಖ ಪಾತ್ರಗಳನ್ನು ಹಾರದ ದಾರದಲ್ಲಿ ಕೆತ್ತಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಬರಬೇಡಿ… ಅಡ್ವಾಣಿ, ಜೋಶಿ ಬಳಿ ಮನವಿ ಮಾಡಿದ ರಾಮ ಮಂದಿರ ಟ್ರಸ್ಟ್