Advertisement

ಸೋಂಕಿತರ ಸಂಚಾರಕ್ಕೆ 500 ವಾಹನ

05:46 AM Jul 09, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ ಸೋಂಕಿತರ ಸುಗಮ ಓಡಾಟಕ್ಕೆ ಆ್ಯಂಬುಲೆನ್ಸ್‌ ಸೇರಿದಂತೆ ಸದ್ಯ 400 ವಾಹನಗಳಿದ್ದು, ಒಟ್ಟು 500 ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ ಅವರು “ಕಾವೇರಿ’ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಡೆಸಿದ ತುರ್ತು ಸಭೆ ಬಳಿಕ ಪ್ರತಿಕ್ರಿಯಿಸಿದರು.

Advertisement

ಮುಖ್ಯಮಂತ್ರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನೂತನವಾಗಿ 10,000 ಹಾಸಿಗೆ ವ್ಯವಸ್ಥೆ ಅಳವಡಿಸಲಾಗುತ್ತಿ ದ್ದು, ಮುಖ್ಯಮಂತ್ರಿಗಳು ಗುರುವಾರ ಪರಿಶೀಲಿಸಲಿದ್ದಾರೆ. ಮೂಲ ಸೌಕರ್ಯದ ಜತೆಗೆ ನಿರ್ವಹಣೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 2000 ಹಾಸಿಗೆ   ಗಳಿದ್ದು ನಿತ್ಯ 200- 300 ಮಂದಿ ದಾಖಲಾಗುತ್ತಿ  ದ್ದಾರೆ. ಸರಿಸುಮಾರು ಅಷ್ಟೇ ಸಂಖ್ಯೆಯ ಜನ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.

ತಪ್ಪು ಅರ್ಥ ಬೇಡ: ಕೋವಿಡ್‌ ಕೇರ್‌ ಸೆಂಟರ್‌ಗೆ ಹೋಗುವವರಿಗೆ ಆ್ಯಂಬುಲೆನ್ಸ್‌  ಅಗತ್ಯವಿಲ್ಲ. ರೋಗ ಲಕ್ಷಣವಿಲ್ಲದವರು ಯಾವುದೇ ವಾಹನದಲ್ಲಾದರೂ ಹೋಗಬಹುದು. ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಬೇಡ. ಆ್ಯಂಬುಲೆನ್ಸ್‌ ಲಭ್ಯತೆ ಇಲ್ಲ ಎಂಬ ಕಾರಣಕ್ಕೆ ಬೇರೆ ವಾಹನ ಮಾಡುತ್ತಿಲ್ಲ. ಬದಲಿಗೆ  ರೋಗ ಲಕ್ಷಣವಿಲ್ಲದವರಿಗೆ ಆ್ಯಂಬುಲೆನ್ಸ್‌ ಅಗತ್ಯವಿಲ್ಲ ಎಂಬ ಕಾರಣಕ್ಕೆ ಬೇರೆ ವಾಹನ ಕಳುಹಿಸಲಾಗಿದೆ ಎಂದರು.

ಸದ್ಯ ಬೆಂಗಳೂರಿನಲ್ಲಿ 400 ಆ್ಯಂಬುಲೆನ್ಸ್‌ ಇತರೆ ವಾಹನಗಳಿದ್ದು, ಇನ್ನೂ 100 ವಾಹನ ಸೇರ್ಪಡೆ ಮಾಡಿ ಒಟ್ಟು 500  ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಈ ಮಾಹಿತಿಯನ್ನು ಎರಡೇ ದಿನದಲ್ಲಿ ಬಿಬಿಎಂಪಿ ವಾರ್‌ರೂಮ್‌ಗೆ ಅಳವಡಿಸಲಾಗುವು ದು. ಕೋವಿಡ್‌ ಪಾಸಿಟಿವ್‌ ಬಂದವರಿಗೆ ಕೂಡಲೇ ಬಿಬಿಎಂಪಿ ವಾರ್‌ ರೂಮ್‌ನಿಂದ ದೂರವಾಣಿ ಕರೆ  ಹೋಗಲಿದೆ. ಇಷ್ಟು ಹೊತ್ತಿಗೆ ವಾಹನ ಬರಲಿದೆ ಎಂಬ ಮಾಹಿತಿ ನೀಡಿ ನಂತರ ಅವರನ್ನು ಆಸ್ಪತ್ರೆ ಇಲ್ಲವೇ ಕೋವಿಡ್‌ ಕೇರ್‌ ಸೆಂಟÃಗೆ ದಾಖಲಿಸುವ ವ್ಯವಸ್ಥೆ ವೈಜ್ಞಾನಿಕವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

1000 ವೈದ್ಯರ  ಅಗತ್ಯ: ಮುಖ್ಯಮಂತ್ರಿಗಳು ಕೋವಿಡ್‌ ಚಿಕಿತ್ಸೆಗೆ ಉತ್ತಮ ಸೌಲಭ್ಯವನ್ನು ವ್ಯವಸ್ಥಿತವಾಗಿ ರೂಪಿಸುವಂತೆ ಸೂಚಿಸಿದ್ದಾರೆ. ಬಿಐಇಸಿಯಲ್ಲಿ 10,000 ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಅಲ್ಲಿ 10,000 ಸೋಂಕಿತರು ಇರುವುದಿಲ್ಲ.  ಆದರೆ 100 ರೋಗಿ ಗಳಿಗೆ ಒಬ್ಬ ವೈದ್ಯರಿರಬೇಕಿದ್ದು, ಅದರಂತೆ 1000 ವೈದ್ಯರು ಬೇಕಾಗುತ್ತಾರೆ. ಪಾಳಿಯಲ್ಲಿ ಕಾರ್ಯ ನಿರ್ವಹಣೆಗೆ ಒಟ್ಟು 1,500 ಮಂದಿ ಅಗತ್ಯವಿದೆ ಎಂದು ಹೇಳಿದರು.

Advertisement

ಇತರೆ ಜಿಲ್ಲೆಗಳಿಗೆ  ಹೋಗುತ್ತಿರುವವರ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಮ್ಮದು ಸೋಂಕಿನ ವಿರುದ್ಧ ಹೋರಾಟವೇ ಹೊರತು ಸೋಂಕಿತರ ವಿರುದ್ಧವಲ್ಲ. ಈ ಸೋಂಕು ಗುಣಮುಖವಾಗದ ಸೋಂಕೆ? ಇದು ಸಾಮಾನ್ಯ  ಸೋಂಕು ಎಂದರು. ನವೆಂಬರ್‌ ಹೊತ್ತಿಗೆ ಬೆಂಗಳೂರಿನಲ್ಲಿ ಸೋಂಕು ಲಕ್ಷ ದಾಟುವ ಸಾಧ್ಯತೆ ಇದೆ ಎಂಬ ಮಾತಿಗೆ ಉತ್ತರಿಸಿದ ಸುಧಾಕರ್‌, ಅಧಿಕಾರಿಗಳ ಮಟ್ಟದಲ್ಲಿ ಸೋಂಕು ಹೆಚ್ಚಳ ಪ್ರಮಾಣ ಗೊತ್ತಾಗುವುದಿಲ್ಲ. ಪರಿಣಿತರು ಸೋಂಕು  ಹೆಚ್ಚಳದ ಬಗ್ಗೆ ನಿಯಮಿತವಾಗಿ ಸಲಹೆ ನೀಡುತ್ತಾರೆ. ಪರಿಣಿತರೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಅದರ ಆಧಾರದ ಮೇಲೆ ಸರ್ಕಾರ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಕೇಂದ್ರಗಳಲ್ಲಿ 50ಸಾವಿರ ರೋಗಿಗಳಿಗೆ ಚಿಕಿತ್ಸೆ: ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ 50,000 ರೋಗಿಗಳಿಗೆ ಚಿಕಿತ್ಸೆ ಕೊಡಲು ಸಿದ್ಧತೆ ನಡೆದಿದೆ. ರಾತ್ರೋರಾತಿ ಯಾವುದೂ ಆಗುವುದಿಲ್ಲ. ಎಲ್ಲದಕ್ಕೂ ಸಮಯ ಬೇಕಾಗುತ್ತದೆ.ಸುಮಾರು 60  ಗರ್ಭಿಣಿಯರನ್ನು ಬೇರೆ ಬೇರೆ ಆಸ್ಪತ್ರೆಗಳಿಂದ ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮೂರು ಆಸ್ಪತ್ರೆಗಳನ್ನು ಮೀಸಲಿರಿಸಲಾಗುತ್ತಿದೆ. ಒಟ್ಟು 150 ಹಾಸಿಗೆ  ಇರುವ ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್‌ 19 ಇರುವವರಿಗೂ ವಿಶೇಷವಾಗಿ ಹೆರಿಗೆ ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತಿ ದೆ ಎಂದು ತಿಳಿಸಿದರು.

ರೊಬೋಟ್‌ ಮೂಲಕ ಸೋಂಕಿತರ ಆರೈಕೆ: ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ಕೋವಿಡ್‌ 19 ನಿಯಂತ್ರಣ ಪಡೆ ಸದಸ್ಯ ಡಾ.ಸಿ.ಎನ್‌. ಮಂಜುನಾಥ್‌ ಮಾತನಾಡಿ, ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ  ಮಾಡಿರುವ 10 ಸಾವಿರ ಹಾಸಿಗೆಯ ಕೋವಿಡ್‌ 19 ಸೋಂಕಿತರ ಆರೈಕೆ ಕೇಂದ್ರದಲ್ಲಿ ರೊಬೋಟ್‌ ಮೂಲಕ ನಿತ್ಯ ಸೋಂಕಿತರ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ವೈದ್ಯರ ರೀತಿಯಲ್ಲೇ ರೊಬೋಟ್‌ ಪ್ರತಿ ಸೋಂಕಿತರ ಬಳಿಯೂ  ಹೋಗಿ ಮಾತನಾಡಿ ಆರೋಗ್ಯದ ಬಗ್ಗೆ ತಿಳಿಯುತ್ತದೆ. ಇದನ್ನು ತಜ್ಞ ವೈದ್ಯರು ದೂರದಿಂದಲೇ ಮಾನಿಟರ್‌ ಮಾಡುತ್ತಿರುತ್ತಾರೆ. ಇದರಿಂದ ತಜ್ಞ ವೈದ್ಯರು ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಕಡಿಮೆ ಯಾಗುತ್ತದೆ.  ಸೋಂಕಿತರು ಹೆಚ್ಚಾದರೂ ಸುಲಭವಾಗಿ ಆರೈಕೆ ಮಾಡಬಹುದು ಎಂದರು.

6000 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳ ಒಪ್ಪಿಗೆ: ನಗರದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿದ್ದು, ಕೋವಿಡ್‌ 19 ಚಿಕಿತ್ಸೆಗೆ ಹೆಚ್ಚುವರಿ 6,000 ಹಾಸಿಗೆಗಳನ್ನು ಮೀಸ ಲಿಡಲು ಖಾಸಗಿ ಆಸ್ಪತ್ರೆಗಳು  ಒಪ್ಪಿಗೆ ಸೂಚಿಸಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, 6,000 ದಿಂದ 7,000 ಹಾಸಿಗೆಗಳನ್ನು ತಮ್ಮದೇ ಆದ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಆಸ್ಪತ್ರೆಗಳಲ್ಲಿ  ಮೀಸಲಿ ಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದರು.

ವೈದ್ಯರು ಕೋವಿಡ್‌ 19ಗೆ ಭಯಪಡ ಬೇಕಿಲ್ಲ. ನನ್ನ ಕುಟುಂಬದಲ್ಲೇ ಮೂವರಿಗೆ ಸೋಂಕು ತಗುಲಿತ್ತು. ಆದರೂ ನಾನು ಹೆದರಲಿಲ್ಲ. ಇದೇನು ಗುಣವಾಗದ ಕಾಯಿಲೆಯಲ್ಲ. ವೈದ್ಯರಿಗೆ ನಾನೇ ಬ್ರ್ಯಾಂಡ್‌ ಅಂಬಾಸಿಡರ್‌. ನಾನು  ವೈದ್ಯನಾಗಿ ಹೆದರಲಿಲ್ಲ. ವೈದ್ಯರು ಹೆದರದೆ ಕರ್ತವ್ಯದಲ್ಲಿ ಧೈರ್ಯವಾಗಿ ತೊಡಗಿಸಿಕೊಳ್ಳಬೇಕು.
-ಡಾ.ಕೆ. ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next