ನಾಗ್ಪುರ: ಅಂಡರ್-19 ಚತುರ್ದಿನ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತನ್ನ ಪ್ರಚಂಡ ಬ್ಯಾಟಿಂಗನ್ನು ದ್ವಿತೀಯ ದಿನಕ್ಕೂ ವಿಸ್ತರಿಸಿದೆ. 5 ವಿಕೆಟಿಗೆ 501 ರನ್ ಪೇರಿಸಿ ಡಿಕ್ಲೇರ್ ಮಾಡಿದೆ. ಜವಾಬಿತ್ತ ಭಾರತದ ಕಿರಿಯರು 2 ವಿಕೆಟಿಗೆ 156 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಒಂದಕ್ಕೆ 311 ರನ್ ಮಾಡಿದಲ್ಲಿಂದ ಮಂಗಳವಾರ ಬ್ಯಾಟಿಂಗ್ ಮುಂದುವರಿಸಿತ್ತು. ಆಗ ನಾಯಕ ಮ್ಯಾಕ್ಸ್ ಹೋಲೆxನ್ 135 ಹಾಗೂ ಜಾರ್ಜ್ ಬಾರ್ಟ್‌ಲೆಟ್ 132 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಬ್ಬರೂ ಬ್ಯಾಟಿಂಗ್ ವಿಸ್ತರಿಸಿ 170ರ ಗಡಿ ದಾಟಿದರು. ಆದರೆ ಇಬ್ಬರಿಗೂ ದ್ವಿಶತಕ ಕೈತಪ್ಪಿತು.
ಹೋಲೆxನ್ 170 ರನ್ (355 ಎಸೆತ, 22 ಬೌಂಡರಿ) ಹಾಗೂ ಬಾರ್ಟ್‌ಲೆಟ್ 179 ರನ್ (249 ಎಸೆತ, 25 ಬೌಂಡರಿ, 3 ಸಿಕ್ಸರ್) ಬಾರಿಸಿ ಔಟಾದರು. ಇವರಿಬ್ಬರ ದ್ವಿತೀಯ ವಿಕೆಟ್ ಜತೆಯಾಟದಲ್ಲಿ 321 ರನ್ ಹರಿದು ಬಂತು.
ಈ ಜೋಡಿ ಬೇರ್ಪಟ್ಟ ಬಳಿಕ ಕ್ರೀಸ್ ಇಳಿದ ಡೆಲಾÅಯ್ ರಾಲಿನ್ಸ್ ಬಿರುಸಿನ ಆಟಕ್ಕಿಳಿದು 94 ಎಸೆತಗಳಿಂದ 70 ರನ್ ಹೊಡೆದರು. 4 ಸಿಕ್ಸರ್, 5 ಬೌಂಡರಿ ಬಾರಿಸಿ ಭಾರತದ ಬೌಲರ್‌ಗಳನ್ನು ಕಾಡಿದರು.
ಭಾರತ ಆರಂಭಿಕರಾದ ರೋಹನ್ ಕುನ್ನುಮಣಿ (13) ಮತ್ತು ಅಭಿಷೇಕ್ ಗೋಸ್ವಾಮಿ (66) ವಿಕೆಟ್ ಕಳೆದುಕೊಂಡಿದೆ. 53 ರನ್ ಮಾಡಿರುವ ಸೌರಭ್ ಸಿಂಗ್ ಹಾಗೂ 23 ರನ್ ಗಳಿಸಿರುವ ನಾಯಕ ಜಾಂಟಿ ಸಿಧು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಅಂಡರ್ 19- 5 ವಿಕೆಟಿಗೆ 501 ಡಿಕ್ಲೇರ್ (ಬಾರ್ಟ್‌ಲೆಟ್ 179, ಹೋಲೆxನ್ 170, ರಾಲಿನ್ಸ್ ಔಟಾಗದೆ 70, ಕಾನಿಷ್R ಸೇಥ್ 85ಕ್ಕೆ 2). ಭಾರತ ಅಂಡರ್ 19- 2 ವಿಕೆಟಿಗೆ 156 (ಅಭಿಷೇಕ್ 66, ಸೌರಭ್ ಬ್ಯಾಟಿಂಗ್ 53, ಸಿಧು ಬ್ಯಾಟಿಂಗ್ 23).