Advertisement

500 ರೂ. ದಂಡ ಪಾವತಿಸಿದ ರಿಷಿ ಧವನ್‌

10:45 PM Apr 10, 2020 | Sriram |

ಹೊಸದಿಲ್ಲಿ: ಕೋವಿಡ್ ವೈರಸ್‌ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಭಾರತ ಸಹಿತ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್‌ಡೌನ್‌ ಮೊರೆ ಹೋಗಿವೆ. ಎ. 14ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಟೀಮ್‌ ಇಂಡಿಯಾದ ಆಟಗಾರ ರಿಷಿ ಧವನ್‌ ಬೇಜವಾಬ್ದಾರಿತನ ಮೆರೆದು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿ 500 ರೂ. ದಂಡ ತೆತ್ತಿರುವ ಬಗ್ಗೆ ವರದಿಯಾಗಿದೆ.

Advertisement

ರಣಜಿ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಪರ ಆಡುವ ರಿಷಿ ಧವನ್‌ ಲಾಕ್‌ಡೌನ್‌ ನಡುವೆ ಪ್ರತ್ಯೇಕ ಪಾಸ್‌ ಇಲ್ಲದೆ ಬ್ಯಾಂಕಿಗೆ ತೆರಳುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು 500 ರೂ. ದಂಡ ತೆತ್ತಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚುತ್ತಿರುವ 30 ವರ್ಷದ ಧವನ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಮುಂಬೈ ಇಂಡಿಯನ್ಸ್‌ ಪರ ಆಡಿ ಗಮನ ಸೆಳೆದಿದ್ದರು. 2016ರಲ್ಲಿ ಭಾರತ “ಎ’ ತಂಡದ ಪರ ನೀಡಿದ್ದ ಭರ್ಜರಿ ಪ್ರದರ್ಶನದಿಂದ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ರಿಷಿ, ಒಟ್ಟು 3 ಏಕದಿನ ಮತ್ತು ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next