Advertisement

ಸ್ಫೋಟಗೊಳ್ಳದ 500 ಕೆಜಿ ಬಾಂಬ್‌! ಚೆರ್ನಿಹಿವ್‌ನ ಕಟ್ಟಡದಲ್ಲಿ ಬಿದ್ದಿದ್ದ ಬಾಂಬು

02:00 AM Mar 08, 2022 | Team Udayavani |

ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿ 12 ದಿನಗಳು ಪೂರ್ಣಗೊಂಡಿವೆ. ನಿರಂತರ ದಾಳಿಯಿಂದ ಉಕ್ರೇನ್‌ನ ಹಲವು ನಗರಗಳು ಪತನದಂಚಿಗೆ ತಲುಪಿವೆ.

Advertisement

ಇದರ ನಡುವೆಯೇ, ಉಕ್ರೇನ್‌ನ ಉತ್ತರ ಭಾಗದಲ್ಲಿರುವ ಚೆರ್ನಿಹಿವ್‌ನಲ್ಲಿ ವಸತಿ ಕಟ್ಟಡವೊಂದರ ಮೇಲೆ ರಷ್ಯಾ ಪಡೆಗಳು ಬರೋಬ್ಬರಿ 500 ಕೆಜಿ ತೂಕ ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಉಕ್ರೇನ್‌ ವಿದೇಶಾಂಗ ಸಚಿವ ಕುಲೇಬಾ, “ಅದೃಷ್ಟಕ್ಕೆ ಈ 500 ಕೆಜಿಯ ಬಾಂಬ್‌ ಸ್ಫೋಟಗೊಳ್ಳದೇ ಉಳಿಯಿತು. ಆದರೆ, ಇನ್ನು ಎಷ್ಟೋ ಬಾಂಬುಗಳು ಸ್ಫೋಟಗೊಂಡು, ಮಕ್ಕಳು, ಮಹಿಳೆಯರು ಸೇರಿ ಹಲವು ಅಮಾ ಯಕರನ್ನು ಬಲಿಪಡೆದು ಕೊಂಡಿವೆ’ ಎಂದು ಬರೆದಿದ್ದಾರೆ.

ಜತೆಗೆ ರಷ್ಯಾದ ಈ ಬೀಭತ್ಸ ಆಕ್ರಮಣದಿಂದ ನಮ್ಮ ಜನರನ್ನು ರಕ್ಷಿಸಲು ಜಗತ್ತು ನಮಗೆ ಸಹಾಯ ಮಾಡಬೇಕು. ನಮ್ಮ ಗಗನವನ್ನು ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲು ನೆರವಾಗಬೇಕು, ನಮಗೆ ಸಮರ ವಿಮಾನ ಗಳನ್ನು ರವಾನಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next