Advertisement

ಅಂಚೆ ಖಾತೆಯಲ್ಲೂ 500 ರೂ. ಬ್ಯಾಲೆನ್ಸ್‌ ಕಡ್ಡಾಯ

07:45 AM Nov 30, 2020 | Suhan S |

ಹೊಸದಿಲ್ಲಿ: ಇನ್ನು ಮುಂದೆ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲೂ ಕನಿಷ್ಠ ಬ್ಯಾಲೆನ್ಸ್‌ ಕಾಯ್ದುಕೊಳ್ಳುವುದು ಕಡ್ಡಾಯ.

Advertisement

ಹೀಗೆಂದು ಸ್ವತಃ ಭಾರತೀಯ ಅಂಚೆ ಇಲಾಖೆಯೇ ಟ್ವೀಟ್‌ ಮಾಡಿದೆ. ಕನಿಷ್ಠ ಮೊತ್ತವನ್ನು 500 ರೂ. ಎಂದು ನಿಗದಿಪಡಿಸಲಾಗಿದೆ. ಅದರಂತೆ, ಡಿ.11 ರೊಳಗೆ ಖಾತೆದಾರರೆಲ್ಲರೂ ತಮ್ಮ ಪೋಸ್ಟ್‌ ಆಫೀಸ್‌ ಖಾತೆಗಳಲ್ಲಿ ಕನಿಷ್ಠ 500 ರೂ.ಗಳಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಖಾತೆಯಿಂದ ನಿರ್ವಹಣ ವೆಚ್ಚ ಕಡಿತ ಗೊಳ್ಳುತ್ತದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ವಿತ್ತೀಯ ವರ್ಷದ ಅಂತ್ಯದಲ್ಲಿ ಖಾತೆಯಲ್ಲಿ ಕನಿಷ್ಠ ಮೊತ್ತ 500 ರೂ.ಗಳು ಇಲ್ಲವೆಂದಾದಲ್ಲಿ, ಖಾತೆ ನಿರ್ವಹಣ ವೆಚ್ಚದ ರೂಪದಲ್ಲಿ 100 ರೂ.ಗಳನ್ನು ಕಡಿತ ಮಾಡಲಾಗುತ್ತದೆ. ಒಂದು ವೇಳೆ, ಉಳಿತಾಯ ಖಾತೆಯಲ್ಲಿ ಶೂನ್ಯ ಮೊತ್ತವಿದ್ದರೆ, ಆಗ ತನ್ನಿಂತಾನೇ ಆ ಖಾತೆ ರದ್ದಾಗಲಿದೆ.

ಇದಲ್ಲದೇ, ತಿಂಗಳ 10ನೇ ದಿನಾಂಕ ದಿಂದ ಕೊನೆಯ ದಿನಾಂಕದವರೆಗಿನ ಅವಧಿಯಲ್ಲಿ ಖಾತೆಯಲ್ಲಿ 500 ರೂ.ಗಳಿಗಿಂತ ಕಡಿಮೆ ಮೊತ್ತವಿದ್ದರೆ, ಆ ತಿಂಗಳ ಬಡ್ಡಿಯೂ ಸಿಗುವುದಿಲ್ಲ ಎಂದೂ ಅಂಚೆ ಇಲಾಖೆ ಸ್ಪಷ್ಟಪಡಿಸಿದೆ. ಪ್ರಸ್ತುತ ವೈಯಕ್ತಿಕ ಅಥವಾ ಜಂಟಿ ಉಳಿತಾಯ ಖಾತೆಗೆ ಶೇ.4ರ ಬಡ್ಡಿ ಒದಗಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next