Advertisement
ಈ ಕುರಿತು ಗುರುವಾರ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು, ಪಾಕಿಸ್ಥಾನದ ವಿರುದ್ಧದ ಗೆಲುವಿನ 50ನೇ ವರ್ಷಾಚರಣೆಯನ್ನು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು ಎಂದಿದ್ದಾರೆ. “”ಕೆಲವು ನಿವೃತ್ತ ಸೇನಾಧಿಕಾರಿಗಳು, 1971ರ ಯುದ್ಧ ಗೆಲುವಿನ 50ನೇ ವರ್ಷಾಚರಣೆಗೆ ಅಷ್ಟಾಗಿ ಮಹತ್ವ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಇಡೀ ವರ್ಷವನ್ನು ಸುವರ್ಣ ವಿಜಯ ವರ್ಷವಾಗಿ ಆಚರಿಸಲಾಗುವುದು ಎಂದು ಹೇಳಲು ನಾನು ಇಷ್ಟಪಡುತ್ತೇನೆ” ಎಂದಿದ್ದಾರೆ. ಇನ್ನು 1971ರ ಯುದ್ಧದಲ್ಲಿ ಶೌರ್ಯ ಪ್ರಶಸ್ತಿ ಪಡೆದ ಯೋಧರ ಗ್ರಾಮಗಳಿಂದ ಮಣ್ಣನ್ನು ಸಂಗ್ರಹಿಸಿ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಒಂದು ಚಿಕ್ಕ ಸ್ಮಾರಕವನ್ನೂ ನಿರ್ಮಿಸಲಾಗುವುದು ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. Advertisement
1971 ಯುದ್ಧದ ಗೆಲುವಿಗೆ 50 ವರ್ಷ
01:36 AM Jan 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.