ಕನಕಪುರ: ಲಂಚ ಪಡೆಯುತ್ತಿದ್ದಾಗ ತಾಲೂಕು ಸರ್ವೆಯರ್ ಮತ್ತುಸಹಾಯಕ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿ ಬಿದಿದ್ದಾರೆ.ಜಮೀನು ಪೋಡಿ ಮಾಡಿಕೊಡುವ ವಿಚಾರಕ್ಕೆ ತಾಲೂಕು ಸರ್ವೆಯರ್‌ಬೀರೇಶ್ ಇವರ ಸಹಾಯಕ ಅಕ್ಷಯ್ ಮೂಲಕ 50 ಸಾವಿರ ರೂ. ಲಂಚಪಡೆಯುವಾಗ ಇಬ್ಬರರನ್ನು ಬಂಧಿಸಲಾಗಿದೆ.
ಕೊರೊನಾ ವೇಳೆಯಲ್ಲೂ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ತಂಡ ಭ್ರಷ್ಟರನ್ನು ಬೇಟೆಯಾಡಿರುವುದು ಸಾರ್ವಜನಿಕರಿಂದ ಪ್ರಸಂಸೆಗೆ ಕಾರಣವಾಗಿದೆ.ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಉಳುಗೊಂಡನಹಳ್ಳಿ ಗ್ರಾಮದ ಕುಮಾರ್ ನೀಡಿದ ದೂರಿನ ಮೇರೆಗೆ ಎಸಿಬಿಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ದೂರು ದಾರ ಉಳಗೊಂಡನಹಳ್ಳಿ ಕುಮಾರ್ ತಮ್ಮ ಎರಡು ಎಕರೆ ಜಮೀನನ್ನು ಪೋಡಿ ಮಾಡಿಕೊಡುವಂತೆ ಕಳೆದ ಎರಡು ವರ್ಷದ ಹಿಂದೆ ಅರ್ಜಿ ಸಲ್ಲಿಸಿ ತಾಲೂಕು ಕಚೇರಿಗೆ ಅಲೆದರೂ ಪೋಡಿ ಮಾಡಿಕೊಟ್ಟಿರಲಿಲ್ಲ. ಬಳಿಕ ತಾಲೂಕು ಸರ್ವೆಯರ್ ಬಿರೇಶ್ ಜಮೀನುಪೋಡಿಗೆ 1.50ಲಕ್ಷ ರೂ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 50 ಸಾವಿರ ಕೊಡುವಂತೆ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕುಮಾರ್ ಜಿಲ್ಲಾ ಎಸಿಬಿಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಬುಧವಾರ 2 ಗಂಟೆಸಮಯದಲ್ಲಿ ನಗರದ ರತ್ನ ಉಪಹಾರ್ ಹೋಟೆಲ್ ಮುಂಭಾಗದಲ್ಲಿಅರ್ಜಿದಾರ ಕುಮಾರ್ ಅವರಿಂದ ತಾಲೂಕು ಸರ್ವೇಯರ್ ಬಿರೇಶ್ ಇವರಸಹಾಯಕ ಅಕ್ಷಯ್ 50 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಎಸಿಬಿಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬಳಿಕ ಕಚೇರಿಯನ್ನು ಜಾಲಾಡಿಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭ್ರಷ್ಟಾಚಾರನಿಗ್ರಹದಳದ ಚಂದ್ರಶೇಖರ್, ಸತ್ಯನಾರಾಯಣ್ ಕಾರ್ಯಾಚರಣೆಯಲ್ಲಿದ್ದರು.