ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಭತ್ತ, ಈರುಳ್ಳಿ ಸೇರಿ ಇತರೆ ಬೆಳೆಯು ಹಾನಿಗೀಡಾಗಿದ್ದು, ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಕೃಷಿ, ತೋಟಗಾರಿಕೆ ಸೇರಿ ಒಟ್ಟಾರೆ 50 ಸಾವಿರ ಎಕರೆ ಪ್ರದೇಶ ಬೆಳೆಯು ಮಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಇನ್ನೂ ಬೆಳೆಹಾನಿಯ ಸಮೀûಾ ಕಾರ್ಯ ಮುಂದುವರೆದಿದೆ.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಮಳೆಗಳು ಉತ್ತಮವಾದವು ಎಂದು ನಂಬಿ ಖುಷಿಯಲ್ಲಿಯೇ ಇದ್ದ ರೈತ ಸಮೂಹಕ್ಕೆ ಅಕಾಲಿಕ ಮಳೆಗಳು ತೀವ್ರ ಸಂಕಷ್ಟವನ್ನೇ ತಂದಿಟ್ಟಿವೆ. ಕಳೆದ ಮೂರು ದಿನಗಳಿಂದ ನಿರಂತರ ಮಳೆಯು ಸುರಿಯುತ್ತಿರುವುದರಿಂದ ಹೊಲದಲ್ಲಿಯೇ ಬೆಳೆಯು ನೆಲಕ್ಕುರಳಿ ಅಪಾರ ನಷ್ಟ ಉಂಟಾಗುವಂತೆ ಮಾಡಿದೆ.
ಅದರಲ್ಲೂ ಗಂಗಾವತಿ ಭಾಗದಲ್ಲಿನ ಭತ್ತವೇ ಹೆಚ್ಚಿನ ಪ್ರಮಾಣದಲ್ಲಿ ನೆಲಕ್ಕೆ ಉರುಳಿದೆ. ಫಸಲು ಕೈಗೆ ಬರುವ ಹಂತದಲ್ಲಿಯೇ ಮಳೆಯಾಗುತ್ತಿರುವುದರಿಂದ ಭತ್ತವು ನೆಲಕ್ಕುರುಳಿ ಅಲ್ಲಿಯೇ ಸಸಿ ನಾಟುತ್ತಿದೆ. ಇನ್ನು ಕೊಪ್ಪಳ ಹಾಗೂ ಯಲಬುರ್ಗಾ ಭಾಗದಲ್ಲಿ ಈರುಳ್ಳಿ,
ಮೆಣಸಿನಕಾಯಿ, ಮೆಕ್ಕೆಜೋಳದ ಬೆಳೆಯ ಪರಿಸ್ಥಿತಿಯನ್ನಂತೂ ಹೇಳತೀರದಾಗಿದೆ.
ಬೆಳೆ ಹಾನಿಯ ಕುರಿತು ಜಿಲ್ಲಾಡಳಿತವು ನಿರಂತರ ನಿಗಾವಹಿಸಿದ್ದು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಬೆಳೆ ಹಾನಿ ಸಮೀûಾ ವರದಿ ತೀವ್ರವಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆಯೂ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅ ಧಿಕಾರಿಗಳ ತಂಡ ರೈತರ ಜಮೀನಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದು, ಕೃಷಿ ಇಲಾಖೆಯಡಿ 18500 ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿಯಾಗಿದ್ದರೆ ತೋಟಗಾರಿಕೆಯಡಿ 1400 ಹೆಕ್ಟೇರ್ ಪ್ರದೇಶವು ಹಾನಿಯಾಗಿದೆ. ಒಟ್ಟಾರೆ ಸೇರಿ 50 ಸಾವಿರ ಎಕರೆ ಪ್ರದೇಶವು ಹಾನಿಯಾಗಿರುವ ಕುರಿತು ಪ್ರಾಥಮಿಕ ವರದಿಯು ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ.
ವಿವಿಧೆಡೆ ಮನೆಗಳೂ ಹಾನಿ: ಜಿಲ್ಲೆಯಲ್ಲಿ ಕೇವಲ ಬೆಳೆಯಷ್ಟೇ ಹಾನಿಯಾಗಿದೆಯಲ್ಲದೇ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮನೆಗಳು ರಸ್ತೆಗಳೂ ಹಾನಿಗೀಡಾಗಿವೆ. ಈ ಕುರಿತು ಗ್ರಾಪಂಗಳಿಗೆ ಜಿಲ್ಲಾಡಳಿತ ಸೂಚಿಸಿದ್ದು, ಸಹಾಯವಾಣಿಯನ್ನೂ ಆರಂಭಿಸಿದೆ. 5ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು ಒಂದೇ ದಿನದಲ್ಲಿ ಮಾಹಿತಿ ದೊರೆತಿದ್ದು, ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮ ಲೆಕ್ಕಾ ಧಿಕಾರಿಗಳಿಗೆ ಮನೆ ಹಾನಿಯಾದ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆಯೂ ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರ ವಿವರ ಸೇರಿ ಇತರೆ ಮಾಹಿತಿ ಸಂಗ್ರಹಿಸುತ್ತಿದೆ.