Advertisement

ಟ್ವಿಟ್ಟರ್ ನಲ್ಲಿ 50 ಮಿಲಿಯನ್ ಫಾಲೋವರ್ಸ್: ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

03:18 PM Sep 13, 2022 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆಷ್ಟೇ ಭರ್ಜರಿ ಶತಕದೊಂದಿಗೆ ಫಾರ್ಮ್ ಗೆ ಮರಳಿರುವ ವಿರಾಟ್ ಸಾಮಾಜಿಕ ಜಾಲತಾಣಗಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ.

Advertisement

ಇನ್ಸ್ಟಾಗ್ರಾಮ್ ನಲ್ಲಿ 211 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಇದೀಗ, ಟ್ವಿಟ್ಟರ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟ್ವಿಟ್ಟರ್ ನಲ್ಲಿ 50 ಮಿಲಿಯನ್ ಫಾಲೋವರ್ಸ್ ಪಡೆದಿರುವ ವಿರಾಟ್, ಈ ಸಾಧನೆ ಮಾಡಿರುವ ವಿಶ್ವದ ಮೊದಲ ಕ್ರಿಕೆಟಿಗ ಎಂದೆನಿಸಿದ್ದಾರೆ.

33 ವರ್ಷ ಕ್ರಿಕೆಟಿಗ ವಿರಾಟ್ ವಿಶ್ವದಲ್ಲಿ ಅತಿ ಹೆಚ್ಚು ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗ ಮತ್ತು ಮೂರನೇ ಕ್ರೀಡಾಪಟು ಎಂದೆನಿಸಿದ್ದಾರೆ. ವಿರಾಟ್ ಗಿಂತ ಹೆಚ್ಚಿನ ಫಾಲೋವರ್ಸ್ ಹೊಂದಿರುವವರೆಂದರೆ ಕ್ರಿಸ್ಟಿಯಾನೋ ರೊನಾಲ್ಡೊ (450ಮಿ) ಮತ್ತು ಲಿಯೋನೆಲ್ ಮೆಸ್ಸಿ (333ಮಿ).

ಇದನ್ನೂ ಓದಿ:ಕೊಹಿನೂರ್ ಪುರಿ ಜಗನ್ನಾಥ್ ದೇವರಿಗೆ ಸೇರಿದ್ದು: ಪ್ರಧಾನಿ, ರಾಷ್ಟ್ರಪತಿ ಮಧ್ಯಸ್ಥಿಕೆಗೆ ಮನವಿ

ವಿರಾಟ್ ಕೊಹ್ಲಿ ಅವರು ಫೇಸ್ ಬುಕ್ ನಲ್ಲಿ 49 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ಮೂರು ಸಾಮಾಜಿ ಜಾಲತಾಣಗಳಲ್ಲಿ ಒಟ್ಟು 310 ಮಿಲಿಯನ್ ಫಾಲೋವರ್ಸ್ ಗಳಲ್ಲಿ ವಿರಾಟ್ ಸಂಪಾದಿಸಿದ್ದಾರೆ.

Advertisement

ಕಳೆದ ಹಲವು ಸಮಯದಿಂದ ಕಳಪೆ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಇತ್ತೀಚೆಗೆ ಅಂತ್ಯವಾದ ಏಷ್ಯಾ ಕಪ್ ನಲ್ಲಿ ಉತ್ತಮ ಲಯಕ್ಕೆ ಮರಳಿದ್ದರು. ಅಂತಿಮ ಪಂದ್ಯದಲ್ಲಿ ಶತಕ ಸೇರಿದಂತೆ ಕೂಟದಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next