Advertisement
ಮಂಗಳೂರಿನ ಪಿವಿಎಸ್ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ. ವಿಕ್ರಮ್ ನಾಯಕ್ ನಗರದ ಬ್ಯಾಂಕ್ವೊಂದರ ಶಾಖೆಯಿಂದ ಪಡೆದ ನೋಟಿನ ಕಂತೆಯ ಮೊದಲ ನೋಟು ನಿಗದಿತ ಅಳತೆಗಿಂತ ಸ್ವಲ್ಪ ಉದ್ದವಾಗಿರುವುದು ಕಂಡುಬಂದಿದೆ.ಈ ಕುರಿತು ಮಾತನಾಡಿರುವ ಅವರು, ಆರ್ಬಿಐ ನಿಯಮಿತವಾಗಿ ನೋಟುಗಳ ಮುದ್ರಣ, ನಿರ್ವಹಣೆ ಮಾಡುತ್ತದೆ. ಆದರೆ ನನಗೆ ಮಂಗಳವಾರ ಸಿಕ್ಕಿದ ನೋಟು ಮಾತ್ರ ನಿಗದಿತ ಅಳತೆಗಿಂತ ಉದ್ದವಾಗಿತ್ತು. ಸಾಮಾನ್ಯವಾಗಿ ಈಗಿನ 50 ರೂ. 13.5 ಸೆಂ.ಮೀ. ಅಳತೆ ಹೊಂದಿದ್ದರೆ, ನನಗೆ ಸಿಕ್ಕಿದ ನೋಟಿನ ಅಳತೆ 15 ಸೆಂ.ಮೀ. ಆಗಿತ್ತು. ನಿಜಕ್ಕೂ ಇದು ಆಶ್ಚರ್ಯ ತರಿಸುವ ವಿಚಾರ. ಮುದ್ರಣ ಪ್ರಕ್ರಿಯೆಯಾಗಿರುವ ದೋಷದಿಂದ ಈ ರೀತಿ ಆಗಿರಬಹುದು ಎನ್ನುತ್ತಾರೆ. Advertisement
ನಿಗದಿತ ಅಳತೆಗಿಂತ ಉದ್ದದ 50 ರೂ. ನೋಟು !
01:21 AM Jan 30, 2020 | Team Udayavani |