Advertisement
ಇಲ್ಲಿನ ಪ್ರಭುಲಿಂಗ ವಾರದ್ ಲೇ ಔಟ್‌ನಲ್ಲಿ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ತಾವು ಕಂಕಣ ಬದ್ಧರಾಗಿದ್ದು, ಯಾವುದೇ ಸಮಸ್ಯೆಗಳಿರಲಿ ಗಮನಕ್ಕೆ ತಂದಲ್ಲಿ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ವರ್ಷದಿಂದ ಹಾಲುಮತ ಸಮಾಜದ ಮುಖಂಡರು ಸಾಧ್ಯವಾದಷ್ಟು ಬಡ ಕುಟುಂಬಗಳನ್ನು ಗುರುತಿಸಿ ಅವರ ಆರ್ಥಿಕ, ಶೈಕ್ಷಣಿಕ ಹಾಗೂ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗೋಣ, ಕನಕದಾಸರ ಜಯಂತ್ಯುತ್ಸವದ ಮೂಲಕ ಅವರ ಜೀವನಾದರ್ಶಗಳನ್ನು ಪಾಲಿಸುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಪ್ರತಿ ಮನೆಯಿಂದ ಕನಕದಾಸರು ಹುಟ್ಟಿ ಬರಲಿ ಎಂದು ಆಶಿಸಿದರು. ಕನಕದಾಸರು ಕೇವಲ ಹಾಲುಮತ ಸಮಾಜಕ್ಕೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿ ಎಂದರು.
Advertisement
ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ನೆರವು: ಕಂದಕೂರ
02:28 PM Nov 27, 2018 | |
Advertisement
Udayavani is now on Telegram. Click here to join our channel and stay updated with the latest news.