Advertisement
ವಿವಾಹ ನಡೆಯುವ ಸ್ಥಳದಲ್ಲಿ ಉತ್ತಮ ಗಾಳಿ, ಬೆಳಕಿಗೆ ಅವಕಾಶ ಇರಬೇಕು. ಕಂಟೈನ್ಮೆಂಟ್ ವಲಯದ ವ್ಯಕ್ತಿಗಳು, 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದೊಳಗಿನ ಮಕ್ಕಳು, ಜ್ವರ, ಶೀತ, ಕೆಮ್ಮು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈ ತೊಳೆಯುವ ಸ್ಥಳಗಳಲ್ಲಿ, ಶೌಚಾಲಯಗಳಲ್ಲಿ ಹ್ಯಾಂಡ್ ವಾಶ್, ಟಿಶ್ಯು ಪೇಪರ್ ಮತ್ತು ನೀರು ಪೂರೈಕೆ ಮಾಡಬೇಕು. ಮದ್ಯಪಾನ, ಪಾನ್ ಗುಟ್ಕಾ, ತಂಬಾಕು ಸೇವನೆ ನಿಷೇಧಿಸಬೇಕು. ವಿವಾಹ ಸ್ಥಳದಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕರ ಪರಿಸರವಿರಬೇಕು. ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ನೇಮಿಸಿದ ನೋಡಲ್ ವ್ಯಕ್ತಿ ಮೇಲ್ವಿಚಾರಣೆ ಮಾಡಬೇಕು. ಸಮಾರಂಭದಲ್ಲಿ ಪಾಲ್ಗೊಂಡವರ ಹೆಸರು, ಸಂಪರ್ಕ ಸಂಖ್ಯೆ ಸಂಗ್ರಹಿಸಬೇಕು. ಭಾಗವಹಿಸುವ ಎಲ್ಲ ಅತಿಥಿಗಳು ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು. ಕೋವಿಡ್ ಸಂಬಂಧಿತ ಯಾವುದೇ ಮಾಹಿತಿಗೆ ಸಹಾಯವಾಣಿ ಸಂಖ್ಯೆ 9745697456, 080- 4684600, 080-66692000 ಮತ್ತು ಆಪ್ತ ಮಿತ್ರ 14410 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. Advertisement
ವಿವಾಹ ಸಮಾರಂಭಕ್ಕೆ 50 ಅತಿಥಿಗಳ ಮಿತಿ
11:43 AM May 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.