ಹೈದರಾಬಾದ್: ಕೋವ್ಯಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ ನ 50 ಉದ್ಯೋಗಿಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿರುವ ವಿಷಯದ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧದ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಕೋವಿಡ್ 19 ಸೋಂಕು ನಿಗ್ರಹದ ಲಸಿಕೆಯ ಪರಿಣಾಮದ ಬಗ್ಗೆಯೂ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ಆಕ್ಸಿಜನ್ ಕೊರತೆಯಿಂದ ಪತ್ನಿ ಎದುರೇ ಪ್ರಾಣ ಬಿಟ್ಟ ವ್ಯಕ್ತಿ
ದೇಶಾದ್ಯಂತ ಹರಡಿರುವ ಮಾರಣಾಂತಿಕ ಕೋವಿಡ್ ಸೋಂಕಿನ ಜೀವ ರಕ್ಷಕ ಲಸಿಕೆಯನ್ನು ಭಾರತ್ ಬಯೋಟೆಕ್ ತನ್ನ ಸಿಬ್ಬಂದಿಗೆ ಯಾಕೆ ನೀಡಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತ್ ಬಯೋಟೆಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ 50 ಸಿಬಂದಿಗಳಿಗೆ ಕೋವಿಡ್ 19 ವೈರಸ್ ದೃಢಪಟ್ಟಿರುವುದಾಗಿ ಭಾರತ್ ಬಯೋಟೆಕ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಟ್ವೀಟ್ ಮೂಲಕ ತಿಳಿಸಿದ್ದರು.
ಕೋವ್ಯಾಕ್ಸಿನ್ ಲಸಿಕೆ ಸರಬರಾಜು ಕುರಿತು ಟೀಕಿಸಿರುವ ಕೆಲವು ರಾಜಕೀಯ ಮುಖಂಡರ ಟೀಕೆಗೆ ಉತ್ತರಿಸಿದ ಅವರು, ನಾವು ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡಾ ಕೆಲವು ರಾಜ್ಯಗಳು ನಮ್ಮ ಬಗ್ಗೆ ಆರೋಪಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಕೋವಿಡ್ ಸೋಂಕಿನಿಂದ ನಮ್ಮ ಸಂಸ್ಥೆಯ 50 ಸಿಬಂದಿಗಳು ಕರ್ತವ್ಯಕ್ಕೆ ಹಾಜರಾಗಿಲ್ಲ, ಈ ಕೋವಿಡ್ ಲಾಕ್ ಡೌನ್ ನಡುವೆಯೂ 24ಗಂಟೆಗಳ ಕಾಲ ನಿಮಗಾಗಿ ಕೆಲಸ
ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು.