ಬೆಂಗಳೂರು: ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ಮೀಸಲಿರಿಸ ಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 7ನೇ ರಾಜ್ಯಮಟ್ಟದ ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಯಲ್ಲಿ ಮಾತನಾಡಿ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ 50ಕೋಟಿ ರೂ. ಮೀಸಲಿಡಲಾ ಗುವುದು. ಪ್ರತಿವರ್ಷವೂ ಸರ್ಕಾರದಿಂದ ಜಕಣಾಚಾರಿಯವರ ಸಂಸ್ಮರಣಾ ದಿನ ಆಚರಿಸಲಾಗುವುದು ಎಂದು ತಿಳಿಸಿದರು.
ವಿಶ್ವಕರ್ಮ ಎನ್ನುವುದು ದೈವಿಕ ಸಂಸ್ಕೃತಿ. ಜಾತಿಧರ್ಮಗಳಿಗೆ ಸಿಮಿತವಾ ಗದೆ ಗುಡಿಗೋಪುರ ಮಠಮಾನ್ಯಗಳನ್ನು ನಿರ್ಮಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅವರು ನಿರ್ಮಿಸಿದ ಶಿಲ್ಪಗಳು ವಿಶ್ವಮಾನ್ಯತೆ ಪಡೆದಿವೆ. ಅವರಂತೆಯೇ ವಿಶ್ವಕರ್ಮ ಸಮಾಜ ಇಂದು ಕುಶಲಕರ್ಮಿ, ವಾಸ್ತುಶಿಲ್ಪಿಗಳಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.
ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ, ಆರ್ಥಿಕ ಸ್ಥಾನಮಾನ ದೊರೆತಿಲ್ಲ. ಸಮಾನತೆ ಸಾಧಿಸಲು ನಮ್ಮ ಸಮಾಜಕ್ಕೆ ಅಧಿಕಾರ ಬೇಕು. ಯಾವ ಅಧಿಕಾರದಿಂದ ನಮ್ಮ ಸಮಾಜ ಅಭಿವೃದ್ಧಿ ಯಾಗುತ್ತದೆ ಎಂದು ಯೋಚಿಸಿ ನೀವೇ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ವಿಶ್ವಕರ್ಮ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಯವರ ಸಂಸ್ಮರಣಾ ದಿನವನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಆಚರಿಸಬೇಕು, ರಾಜ್ಯದ ವಿಶ್ವವಿದ್ಯಾಲಯ ವೊಂದಕ್ಕೆ ಮತ್ತು ಕಲಬುರಗಿ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಜಕಣಾಚಾರಿ ಹೆಸರಿಡಬೇಕು, ಬೇಲೂರಿನ ಚನ್ನಕೇಶವ ಆವರಣದಲ್ಲಿ ಜಕಣಾಚಾರಿ ಪುತ್ಥಳಿ ಸ್ಥಾಪಿಸಬೇಕು, ಅಭಿವೃದ್ಧಿ ನಿಗಮಕ್ಕೆ 200 ಕೋಟಿ ರೂ. ಅನುದಾನ ನೀಡಬೇಕು, ವಿಶ್ವಕರ್ಮ ಪಂಚ ಕಸುಬುಗಳಿಗೆ ಸಂಬಂಧಿಸಿದ ವಿವಿ ಸ್ಥಾಪಿಸಬೇಕು ಎಂದು ಬೇಡಿಕ ಮಂಡಿಸಿದರು.