ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ 50 ಜನರಿಗೆ ಕೋವಿಡ್ ಸೋಂಕು ಕಂಡು ಬಂದಿದ್ದು ಗ್ರಾಮಕ್ಕೆ ತಹಸೀಲ್ದಾರ್ ಯು.ನಾಗರಾಜ ಭೇಟಿ ನೀಡಿ ಗ್ರಾಮಸ್ಥರಿಗೆ ಕೋವಿಡ್ ರೋಗ ಹಾಗು ಚಿಕಿತ್ಸೆ ಕುರಿತು ಜನಜಾಗೃತಿ ಮೂಡಿಸಿದರು.
ಈ ವೇಳೆ ಅವರು ಮಾತನಾಡಿ, ಗ್ರಾಮದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾಗಿದ್ದು ಪ್ರತಿಯೊಬ್ಬರು ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈಗಾಗಲೇ ಪಾಸಿಟಿವ್ ಬಂದವರು ಮನೆಯಲ್ಲಿ ಚಿಕಿತ್ಸೆ ಪಡೆಯಬೇಕು. ಅನುಕೂಲ ಇಲ್ಲದಿದ್ದರೆ ಹೇಮಗುಡ್ಡದ ಬಳಿ ಆರಂಭಿಸಲಾಗಿರುವ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಬೇಕು. ಕೋವಿಡ್ ಸೋಂಕೆಗೆ ಹೆದರದೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಗೋಮೂತ್ರವೇ ರಾಮಬಾಣ ಎಂಬ ಬಿಜೆಪಿ ಶಾಸಕ: ವಿಡಿಯೋ ವೈರಲ್
ಸರಕಾರಿ ಆಸ್ಪತ್ರೆ ಮತ್ತು ಕೊರೊನಾ ಪೀಡಿತರ ಮನೆಗೆ ತೆರಳಿ ಮಾರ್ಗಸೂಚಿ ಅನುಸರಿಸುವಂತೆ ಮನವಿ ಮಾಡಿದರು.
ಗ್ರಾ.ಪಂ.ಅಧ್ಯಕ್ಷ ಕೋಸಗಿ ತಿಮ್ಮಪ್ಪ ಬಾಳೆಕಾಯಿ,ಪಿಡಿಒ ಕೆ.ಕೃಷ್ಣಪ್ಪ ಸೇರಿ ಆರೋಗ್ಯ ಆಶಾ,ಅಂಗನವಾಡಿ ಕಾರ್ಯಕರ್ತೆಯರಿದ್ದರು