Advertisement

ಚೀನದಲ್ಲೂ ಅರ್ಧಾಂಶ ಮಂದಿಗೆ ಮೋದಿ ಇಷ್ಟ !

12:22 AM Aug 28, 2020 | mahesh |

ಬೀಜಿಂಗ್: ಗಾಲ್ವಾನ್‌ ಘರ್ಷಣೆ ಬಳಿಕ ಮರ್ಮಾಘಾತ ಅನುಭವಿಸಿರುವ ಚೀನವು ಈಗ ಭಾರತವನ್ನು ಪುಸಲಾಯಿಸಲು, ಮೋದಿ ಅವರ ವಿಶ್ವಾಸಗಳಿಸಲು ಭಾರೀ ಸರ್ಕಸ್‌ ನಡೆಸುತ್ತಿದೆ.  ಇದಕ್ಕೆ ಸಾಕ್ಷಿ ಅಲ್ಲಿನ “ಗ್ಲೋಬಲ್‌ ಟೈಮ್ಸ್‌’ ನಡೆಸಿದ ಸಮೀಕ್ಷೆಯೊಂದು ವಿಶ್ವವನ್ನೇ ಅಚ್ಚರಿಗೊಳಿಸುವಂತಿದೆ. “ಚೀನದ ಶೇ.50ರಷ್ಟು ಪ್ರಜೆಗಳು ಮೋದಿ ಸರಕಾರವನ್ನು ಇಷ್ಟಪಟ್ಟಿದ್ದಾರೆ’ ಎಂದು ಚೀನದ ಈ ಸರಕಾರಿ ಮುಖವಾಣಿ ಹೊಗಳಿದೆ. ಹೆಚ್ಚಿನ ಚೀನೀಯರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಡಳಿತಕ್ಕಿಂತ ಮೋದಿ ಸರಕಾರಕ್ಕೇ ಬಹು ಪರಾಕ್‌ ಎಂದಿದ್ದಾರಂತೆ!

Advertisement

ಸಮೀಕ್ಷೆಯಲ್ಲಿ ಮತ್ತೇನಿದೆ?
ಭಾರತದಲ್ಲಿ ಚೀನ ವಿರೋಧಿ ಭಾವನೆ ಹೆಚ್ಚಾಗಿದೆ ಎಂದು ಶೇ.70 ಜನರು ಅಭಿಪ್ರಾಯ ದಾಖಲಿಸಿದ್ದಾರೆ. ಶೇ.30ಕ್ಕೂ ಹೆಚ್ಚು ಜನರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಲಿದೆ ಎಂದು ಆಶಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.9 ಮಂದಿ ಭಾರತ-ಚೀನ ಬಿಕ್ಕಟ್ಟು ಅಲ್ಪಾವಧಿಯಲ್ಲಿ ಶಮನಗೊಳ್ಳಲಿದೆ ಎಂದಿದ್ದಾರೆ. ಶೇ.25 ಮಂದಿ ಉಭಯ ದೇಶಗಳ ಸಂಬಂಧ ದೀರ್ಘ‌ಕಾಲದವರೆಗೆ ಸದೃಢವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next