ಅಮ್ಮಾನ್ (ಜೋರ್ಡನ್): ಏಷ್ಯನ್ ಯುತ್ ಆ್ಯಂಡ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಐವರು ಸ್ವರ್ಣ ಸಾಧನೆಗೈದಿದ್ದಾರೆ.
ಕಳೆದ ಸಲ ಬೆಳ್ಳಿ ಪದಕ ಜಯಿಸಿದ್ದ ತಮನ್ನಾ (50 ಕೆಜಿ) ಮತ್ತು ನಿವೇದಿತಾ ಕಾರ್ಕಿ (48 ಕೆಜಿ) ಈ ಸಲ ಚಿನ್ನದ ಸಾಧನೆಯೊಂದಿಗೆ ಮೆರೆದರು. ಇವರೊಂದಿಗೆ ಶಾಹೀನ್ (60 ಕೆಜಿ), ರವೀನಾ (63 ಕೆಜಿ) ಮತ್ತು ಮುಸ್ಕಾನ್ (75 ಕೆಜಿ) ಕೂಡ ತಮ್ಮ ವಿಭಾಗಗಳಲ್ಲಿ ಮೊದಲಿಗರಾಗಿ ಬಂಗಾರ ಜಯಿಸಿದರು.
ಮೊದಲ ಚಿನ್ನ ತಂದಿತ್ತ ನಿವೇದಿತಾ ಉಜ್ಬೆಕಿಸ್ಥಾನದ ಸೈದಖೋನ್ ರಕೊ¾ನೋವಾ ಅವರನ್ನು 3-2ರಿಂದ ಮಣಿಸಿದರು. ಬಳಿಕ ತಮನ್ನಾ ಉಜ್ಬೆಕಿಸ್ಥಾನದ ಮತ್ತೋರ್ವ ಬಾಕ್ಸರ್ ರೊಬಿಯಂಖೋನ್ ಬಖೀ¤ಯೊರೋವಾ ಅವರನ್ನು ಹಿಮ್ಮೆಟ್ಟಿಸಿದರು.
ಇದನ್ನೂ ಓದಿ:ಸ್ಪ್ಯಾನಿಶ್ ಪ್ಯಾರಾ ಬ್ಯಾಡ್ಮಿಂಟನ್: ಭಾರತಕ್ಕೆ 21 ಪದಕ
ಫೈನಲ್‌ನಲ್ಲಿ ಎಡವಿದ ಪ್ರಿಯಾಂಕಾ (66 ಕೆಜಿ) ಮತ್ತು ಕೀರ್ತಿ (+81 ಕೆಜಿ) ಬೆಳ್ಳಿಗೆ ಸಮಾಧಾನಪಟ್ಟರು. ರೇಣು (52 ಕೆಜಿ), ತನಿಷಾ ಲಾಂಬಾ (54 ಕೆಜಿ), ಪ್ರಾಚಿ (57 ಕೆಜಿ), ಪ್ರಾಂಜಲಾ ಯಾದವ್ (70 ಕೆಜಿ) ಮತ್ತು ಸ್ನೇಹಾ (81 ಕೆಜಿ) ಕಂಚು ಗೆದ್ದರು.