Advertisement

ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುವುದು ಡೌಟ್‌: ಜಿಟಿಡಿ

11:36 PM Jul 13, 2019 | Lakshmi GovindaRaj |

ಮೈಸೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ. ಆದರೆ, ಮುಂದಿನ ನಾಲ್ಕು ವರ್ಷವೂ ಇದೇ ಸರ್ಕಾರ ಇರುತ್ತೆ ಎಂದು ಹೇಳಲಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಮಂಡಿಸಲು ಸ್ಪೀಕರ್‌ ಅವರಲ್ಲಿ ದಿನಾಂಕ ಕೇಳಿದ್ದಾರೆ. ಸ್ಪೀಕರ್‌ ನಿಗದಿಪಡಿಸಿದ ದಿನಾಂಕದಂದು ಅವರು ಖಂಡಿತ ವಿಶ್ವಾಸಮತ ಯಾಚನೆ ಮಾಡುತ್ತಾರೆ. ಅಂದು ಎಲ್ಲ ಶಾಸಕರೂ ಸದನದಲ್ಲಿ ಹಾಜರಿರುತ್ತಾರೆ ಎಂದರು.

“ಆದರೂ, ಈ ಸಮ್ಮಿಶ್ರ ಸರ್ಕಾರ ಐದು ವರ್ಷ ಅವಧಿ ಪೂರ್ಣಗೊಳಿಸುತ್ತದೆ ಎಂದು ನಾನು ಹೇಳುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಎಲ್ಲರಿಗೂ ಭಯವಿದೆ. ಆದರೆ, ಸದ್ಯಕ್ಕೆ ಸರ್ಕಾರ ಬೀಳುವ ಭಯ ಇಲ್ಲ’ ಎಂದರು. “ಬಿಜೆಪಿಗೆ “ರಿವರ್ಸ್‌ ಆಪರೇಷನ್‌’ ಭಯ ಇದೆಯೋ, ಇಲ್ಲವೋ ಗೊತ್ತಿಲ್ಲ. ನನಗಂತೂ ಯಾವುದೇ ರೀತಿಯ ಭಯವಿಲ್ಲ. ನಾವು ಆರಾಮವಾಗಿದ್ದೇವೆ. ನಾನು ಮುಂಬೈಗೆ ಹೋಗುವ ಅಗತ್ಯವಿಲ್ಲ. ಎಲ್ಲವೂ ಇಲ್ಲೇ ಆಗುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next