Advertisement

ಮೋದಿಗೆ 5 ವರ್ಷ ಸಾಕಾಗಲ್ಲ :ನಟಿ ಕಂಗನಾ ರಣಾವುತ್‌ ಹೇಳಿದ್ದೇನು?

11:08 AM Jul 29, 2018 | |

ಮುಂಬಯಿ: ಬಾಲಿವುಡ್‌ ನಟಿ ಕಂಗಾನಾ ರಣಾವುತ್‌ ರಾಜಕೀಯ ರಂಗಕ್ಕೆ ಕಾಲಿಡುತ್ತಾರೆಯೇ ಎನ್ನುವ ಕುರಿತು ಚರ್ಚೆಗಳು ಶುರುವಾಗಿವೆ. ಅದಕ್ಕೆ ಸಾಕ್ಷಿ ಎಂಬಂತೆ ಕಂಗನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ಮತ್ತೆ ಪ್ರಧಾನಿ ಆಗಬೇಕು ಎಂದಿದ್ದಾರೆ. 

Advertisement

ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ನಿಜವಾದ ನಾಯಕ ಮತ್ತು ಪ್ರಧಾನಿಯಾಗಲು ಅರ್ಹತೆಯುಳ್ಳ ವ್ಯಕ್ತಿ. ತಂದೆ, ತಾಯಿಯ ಬಲದಿಂದ ಹುದ್ದೆಗೆ ಬಂದವರಲ್ಲ. ಕಠಿಣ ಶ್ರಮ ಮತ್ತು ಸಾಧನೆಯ ಮೂಲಕ ಹುದ್ದೆಗೇರಿದವರು ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ದೇಶದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಮೋದಿ ಅವರಿಗೆ 5 ವರ್ಷ ಸಾಕಾಗದು. ಅವರು 2019 ರಲ್ಲೂ ಮತ್ತೆ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next