ನವದೆಹಲಿ : 5 ವರ್ಷದ ಬಾಲಕಿ ಕೇವಲ ಎರಡು ಗಂಟೆಯಲ್ಲಿ ಬರೋಬ್ಬರಿ 36 ಪುಸ್ತಕಗಳನ್ನು ಓದಿ ಗಿನ್ನೆಸ್ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರನ್ನು ಗಿಟ್ಟಿಸಿಕೊಂಡಿದ್ದಾರೆ. ಚೆನ್ನೈ ಮೂಲದ ಅಮೆರಿಕಾದ ಕಿಯಾರಾ ಕೌರ್ ಎಂಬ ಬಾಲಕಿ ಈ ಸಾಧನೆಯನ್ನು ಮಾಡಿದ್ದಾಳೆ.
ಈ ಬಾಲಕಿ ಪುಸ್ತಕವನ್ನು ಓದುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ನಲ್ಲು ಹೆಸರು ಪಡೆದಿದ್ದಾಳೆ. 105 ನಿಮಿಷಗಳಲ್ಲಿ 36 ಪುಸ್ತಕಗಳನ್ನು ಓದಿರುವ ಕಿಯಾರಾ ಕೌರ್ ಗೆ ಓದುವುದೆಂದರೆ ತುಂಬಾ ಇಷ್ಟವಂತೆ. ಈ ಬಾಲಕಿಯ ಓದುವ ಹವ್ಯಾಸವನ್ನು ಆಕೆಯ ಶಾಲಾ ಶಿಕ್ಷಕರು ಗುರುತಿಸಿದ್ದಾರೆ. ಅಬು ದುಬೈ ಶಾಲೆಯಲ್ಲಿ ಓದುತ್ತಿದ್ದ ಕೌರ್ ಹವ್ಯಾಸದ ಬಗ್ಗೆ ಶಿಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಬಾಲಕಿಯ ಪೋಷಕರು ಹೇಳುವ ಹಾಗೆ ಕಿಯಾರಾ ಕೌರ್ ಕಳೆದ ವರ್ಷ 200 ಪುಸ್ತಕಗಳನ್ನು ಓದಿದ್ದಾಳಂತೆ. ಅಲ್ಲದೆ ಇನ್ನು ಹಲವು ಪುಸ್ತಕಳನ್ನು ಓದುತ್ತಿದ್ದಾಳಂತೆ. ಹಳೆಯ ಪುಸ್ತಕಗಳನ್ನು ಓದುವುದೆಂದರೆ ಈ ಚಿಕ್ಕ ಮಗುವಿಗೆ ತುಂಬಾ ಇಷ್ಟವಂತೆ.
ಭಾರತ ಮೂಲದ ಈ ಅಮೆರಿಕಾ ಬಾಲಕಿಗೆ ಓದುವ ಹವ್ಯಾಸ ತನ್ನ ತಾತನಿಂದ ಬಂದಿದೆ. ಆಕೆಯು ತನ್ನ ತಾತನೊಂದಿಗೆ ಫೋನಿನಲ್ಲಿ ಮಾತನಾಡುತ್ತ ಪುಸ್ತಕಗಳನ್ನು ಓದುತ್ತಿದ್ದು, ಈಕೆಯ ಓದುವ ಶೈಲಿ ಮತ್ತು ಕಥೆ ಹೇಳುವ ರೀತಿ ಆಕೆಯ ತಾತನಿಗೆ ಇಷ್ಟವಂತೆ.
ಕಿಯಾರಾ ಕೌರ್ ಪುಸ್ತಕಗಳನ್ನು ಓದಲು ಆಸಕ್ತಿ ಹೇಗೆ ಬಂತು ಅನ್ನುವುದನ್ನು ಹೇಳಿದ್ದಾಳೆ. ಪುಸ್ತಕಗಳಲ್ಲಿ ಇರುವ ಬಣ್ಣ ಬಣ್ಣದ ಚಿತ್ರಗಳನ್ನು ನೋಡಿ ಮತ್ತು ಅಕ್ಷರಗಳನ್ನು ಹೇಗೆ ಬರೆದರು ಎಂಬುದನ್ನು ನೋಡಿ ನೋಡಿ ನಂತರದ ದಿನಗಳಲ್ಲಿ ಓದುವ ಕಲೆ ಹವ್ಯಾಸವಾಗಿದೆಯಂತೆ. ಇವಳಿಗೆ ಇಷ್ಟವಾಗುವ ಪುಸ್ತಕಗಳು ಎಂದರೆ ಅಲಿಕ್ ಅವರ ವಂಡರ್ಲ್ಯಾಂಡ್, ಸಿಂಡ್ರೆಲ್ಲಾ, ಲಿಟ್ಟಲ್ ರೆಡ್ ರೈಡಿಂಗ್ ಹೋಡ್ ಮತ್ತು ಶೂಟಿಂಗ್ ಸ್ಟಾರ್ .