Advertisement

ಧರ್ಮಸ್ಥಳ ಟ್ರಸ್ಟ್‌ನಿಂದ ಜಿಲ್ಲೆಗೆ 5 ಟನ್‌ ಆಕ್ಸಿಜನ್‌

07:19 PM Jun 04, 2021 | Team Udayavani |

ಬಾಗಲಕೋಟೆ: ಕೋವಿಡ್‌ 2ನೇ ಅಲೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನ ವತಿಯಿಂದ ಜಿಲ್ಲಾ ಆಸ್ಪತ್ರೆಗೆ 5 ಟನ್‌ ಪ್ರಾಣ ವಾಯು ಆಕ್ಸಿಜನ್‌ ಕೊಡುಗೆಯಾಗಿ ನೀಡಲಾಯಿತು.

Advertisement

ಗುರುವಾರ ಜಿಲ್ಲೆಗೆ ಆಗಮಿಸಿದ ಆಕ್ಸಿಜನ್‌ ಟ್ಯಾಂಕರ್‌ನ್ನು ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕ ಡಾ|ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಬರಮಾಡಿಕೊಂಡರು.

ಧರ್ಮಸ್ಥಳದ ಟ್ರಸ್ಟ್‌ನ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಆಕ್ಸಿಜನ್‌ ಹಸ್ತಾಂತರಿಸುವ ಕಾರ್ಯ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ|ವೀರಣ್ಣ ಚರಂತಿಮಠ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಮೂಲಕ ಕೋವಿಡ್‌ನ‌ಂತಹ ಸಂದರ್ಭದಲ್ಲಿ ರಾಜ್ಯದ ತುಂಬಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ 5 ಕಾನ್ಸಂಟ್ರೇಟರ್‌ ಹಾಗೂ 5 ಟನ್‌ ಆಕ್ಸಿಜನ್‌ ಕೊಡುಗೆಯಾಗಿ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಕೋವಿಡ್‌ ಮಹಾಮಾರಿ ಬೇಗನೇ ನಾಶವಾಗಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಧರ್ಮಸ್ಥಳ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಮಾತನಾಡಿ, ರಾಜ್ಯದಲ್ಲಿ ಒಟ್ಟು 3.93 ಕೋಟಿ ರೂ.ಗಳ ಮೌಲ್ಯದ 285 ಕಾನ್ಸಂಟ್ರೇಟರ್‌, 20 ವೆಂಟಿಲೇಟರ್‌, 8 ಹೈಪ್ಲೋ ಮಷಿನ್‌, 45 ಟನ್‌ ಆಕ್ಸಿಜನ, 10 ಸಾವಿರ ಫುಡ್‌ ಕಿಟ್‌, ಸಾನಿಟೈಸರ್‌, ಮಾಸ್ಕ್, ಮೆಡಿಷನ್‌, ಬೆಡ್‌ ಶೀಟ್‌ ಹಾಗೂ 250 ತಾತ್ಕಾಲಿಕ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯ ಪ್ರಕಾಶ ಹಂಡಿ, ರವೀಂದ್ರ ಹಂಡಿ, ರಂಗನಗೌಡರ ದಂಡನ್ನವರ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌.ದೇಸಾಯಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪ್ರಕಾಶ ಬಿರಾದಾರ, ಧರ್ಮಸ್ಥಳ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ, ಯೋಜನಾಧಿಕಾರಿ ಜ್ಯೋತಿ ಜೋಳದ ಮುಂತಾದವರು ಉಪಸ್ಥಿತರಿದ್ದರು.

Advertisement

ನಂತರ ಜಿಲ್ಲಾ ಆಸ್ಪತ್ರೆಯಲ್ಲಿರುವ ಪ್ರಾಣ ವಾಯು ಆಕ್ಸಿಜನ್‌ ಪ್ಲಾಂಟ್‌ಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next